ಕರ್ನಾಟಕ

karnataka

ETV Bharat / state

ಮೋದಿ ಮಿಲಿಟರಿ ಸಮವಸ್ತ್ರ, ಗಾಗಲ್ ಧರಿಸಿ ಪೋಸ್ ಕೊಡ್ತಾರೆ: ಮಾಜಿ ಸಚಿವ ಎಚ್​.ಕೆ ಪಾಟೀಲ್ ವಾಗ್ದಾಳಿ

ಮನೆ ಒಡೆಯುವ, ಸಮುದಾಯಗಳ ನಡುವೆ ಬೆಂಕಿ ಹಚ್ಚುವ ಪ್ರಹ್ಲಾದ್ ಜೋಶಿ ನನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವುದನ್ನ ನೋಡಿದ್ರೇ ರಕ್ತ ಕುದಿಯುತ್ತೆ. ಜಿಲ್ಲೆ ಶಾಂತವಾಗಿರಲು ಜೋಶಿ ಬಿಡೋದಿಲ್ಲ ಅಂತಾ ಮೈತ್ರಿ ಪಕ್ಷಗಳ ಅಭ್ಯರ್ಥಿ ವಿನಯ ಕುಲಕರ್ಣಿ ವಾಗ್ದಾಳಿ.

ಮೋದಿ

By

Published : Apr 17, 2019, 2:34 PM IST



ಧಾರವಾಡ: ಕಾನೂನು ಮೀರಿ‌ ಮಿಲಿಟರಿ ಸಮವಸ್ತ್ರ ಧರಿಸಿ ಗಾಗಲ್ ಹಾಕಿಕೊಂಡು ಪ್ರಧಾನಿ ಮೋದಿ ಪೋಸ್ ಕೊಡ್ತಾರೆ ಎಂದು ಮಾಜಿ ಸಚಿವ ಹೆಚ್​.ಕೆ ಪಾಟೀಲ್​ ಪ್ರಧಾನಿ ವಿರುದ್ಧ ಕಿಡಿ ಕಾರಿದ್ದಾರೆ.

ಮಿಲಿಟರಿ‌ ಯುನಿಫಾರ್ಮ್ ಹಾಕಿದ್ರೇ ಯುವಕರನ್ನು ಆಕರ್ಷಿಸಬಹುದು ಎಂಬ ಉದ್ದೇಶ ಮೋದಿಗಿದ್ದು, ಸಿವಿಲಿಯನ್ ಮಿಲಿಟರಿ ಯುನಿಫಾರ್ಮ್ ಹಾಕಬಾರದು ಅಂತಾ ಸುತ್ತೋಲೆಗಳೇ ಇವೆ ಎಂದು ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

ಮೋದಿ


ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್​ ಕುಮಾರ್​ ಕಾಂಗ್ರೆಸ್ ಪ್ರಣಾಳಿಕೆಯನ್ನು ಟೀಕಿಸಿದ್ದಾರೆ. ಪ್ರಶ್ನೆ ಮಾಡಲು ಅವರ್ಯಾರು? ಕಾಂಗ್ರೆಸ್ ಪ್ರಣಾಳಿಕೆ ಜನಪರವಾಗಿದ್ದು, ಮಹತ್ವದ ಅಂಶಗಳನ್ನು ಒಳಗೊಂಡಿದೆ. ಇದನ್ನು ನೋಡಿ ಜನ ಬದಲಾವಣೆ ಬಯಸುತ್ತಿದ್ದು, ನೀತಿ ಆಯೋಗದ ಸ್ಥಾನವನ್ನು ರಾಜೀವ್ ಕುಮಾರ್​ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ನಂತರ ಮೈತ್ರಿ ಅಭ್ಯರ್ಥಿ ವಿನಯ್​ ಕುಲಕರ್ಣಿ ಮಾತನಾಡಿ, ಪ್ರಹ್ಲಾದ್​ ಜೋಶಿ ನನ್ನ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವುದನ್ನು ನೋಡಿದರೇ ರಕ್ತ ಕುದಿಯುತ್ತದೆ. ಜೋಶಿ ಒಬ್ಬ ಗೋಮುಖ ವ್ಯಾಘ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆ ಶಾಂತವಾಗಿರಲು ಜೋಶಿ ಬಿಡೋದಿಲ್ಲ ಎಂದು ಹರಿಹಾಯ್ದರು.

ABOUT THE AUTHOR

...view details