ಹುಬ್ಬಳ್ಳಿ:ಹುಬ್ಬಳ್ಳಿಯಲ್ಲಿ ಹಾಡಹಗಲೇ ನಡೆದ ಯುವಕನ ಕೊಲೆ ವಾಣಿಜ್ಯ ನಗರಿಯನ್ನು ಬೆಚ್ಚಿಬಿಳಿಸಿತ್ತು. ಭಾನುವಾರ ನಡೆದ ಭೀಕರ ಕೊಲೆಯ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ರಸ್ತೆಯಲ್ಲಿಯೇ ನೆತ್ತರು ಹರೆದಿರುವ ಭಯಾನಕ ದೃಶ್ಯ ಈಗ ವೈರಲ್ ಆಗಿದೆ. ಹುಬ್ಬಳ್ಳಿಯ ನೇಕಾರ ನಗರದಲ್ಲಿ ನಾಗರಾಜ ಚಲವಾದಿ ಎಂಬ ಯುವಕನನ್ನು ಕೊಲೆ ಮಾಡಲಾಗಿತ್ತು. ತಲ್ವಾರ್ ನಿಂದ ಕೊಚ್ಚಿ, ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದು, ಇದೀಗ ಕೊಲೆ ನಡೆದ ಸ್ಥಳದಲ್ಲಿನ ವಿಡಿಯೋ ವೈರಲ್ ಆಗಿದೆ.
ರಕ್ತ ಸುರಿಯೋದನ್ನು ಕಂಡು ಬಟ್ಟೆ ಕಟ್ಟಿದ ಮಹಿಳೆ: ಇನ್ನೂ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿರೋ ನಾಗರಾಜ ಚಲವಾದಿ ಹಾಗೂ ಪಕ್ಕದಲ್ಲಿ ಬಿದ್ದಿರುವ ತಲ್ವಾರ್ ಹಾಗೂ ಕಲ್ಲು ವಿಡಿಯೋದಲ್ಲಿ ಸೆರೆಯಾಗಿದೆ. ಈ ವೇಳೆ ನಾಗರಾಜನ ಸ್ಥಿತಿ ಕಂಡು ಮಹಿಳೆಯೊಬ್ಬರು ಸಹಾಯಕ್ಕೆ ಮುಂದಾಗಿದ್ದಾಳೆ. ಯಾರೂ ಮುಟ್ಟದಿದ್ದರೂ, ಧೈರ್ಯವಾಗಿ ರಕ್ತ ಸುರಿಯೋದನ್ನು ಕಂಡು ಬಟ್ಟೆ ಕಟ್ಟಿದ ಮಹಿಳೆಯ ವಿಡಿಯೋ ವೈರಲ್ ಆಗಿದೆ.
ತಲೆಗೆ ಬಟ್ಟೆ ಕಟ್ಟಿ ನಾಗರಾಜ್ ನನ್ನು ಉಳಿಸೋ ಪ್ರಯತ್ನ ಮಾಡಿದ್ದಾಳೆ. ಸುತ್ತ ನೂರಾರು ಜನ ನಿಂತಿದ್ದರೂ, ಯಾರೂ ಮುಟ್ಟದಿದ್ದರೂ, ಮಹಿಳೆಯೊಬ್ಬಳು ನಾಗರಾಜ್ ಉಳಿಸೋ ಪ್ರಯತ್ನ ಮಾಡಿದ್ದಾಳೆ. ಆದರೆ, ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ್ದ, ನಾಗರಾಜ ಕೊನೆಗೂ ಪ್ರಾಣ ಬಿಟ್ಟಿದ್ದಾನೆ. ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸುವ ಮಾರ್ಗ ಮದ್ಯೆ ನಾಗರಾಜ ಸಾವನ್ನಪ್ಪಿದ್ದಾನೆ. ಮಹಿಳೆ ಸಹಾಯಕ್ಕೆ ಮುಂದಾಗಿರೋ ವಿಡಿಯೋ ಇದೀಗ ವೈರಲ್ ಆಗಿದ್ದು, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಕೊಲೆ ಮಾಡಿರುವ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.