ಹುಬ್ಬಳ್ಳಿ: ಇಂದು ತಾಯಂದಿರ ದಿನದ ಸಂಭ್ರಮ. ಹೆಚ್ಚಿನವರು ತಮ್ಮ ತಾಯಂದಿರ ಕೈಯಲ್ಲಿ ಕೇಕ್ ಕತ್ತರಿಸಿ, ಸಿಹಿ ತಿನಿಸೋ ಮೂಲಕ ಈ ದಿನವನ್ನು ಆಚರಿಸುತ್ತಾರೆ. ಆದರೆ ಇಲ್ಲೊಂದು ಯುವಕರ ತಂಡದವರು ವಿಭಿನ್ನವಾಗಿ ತಾಯಂದಿರ ದಿನವನ್ನು ಆಚರಣೆ ಮಾಡಿದ್ದಾರೆ.
ಕೊರೊನಾ ಎರಡನೇ ಅಲೆಯ ಅಬ್ಬರ ಜೋರಾಗಿದ್ದು ಆಕ್ಸಿಜನ್ ಸಿಗದೆ ಅದೆಷ್ಟೋ ಜನರು ಸಾವನ್ನಪ್ಪುತ್ತಿದ್ದಾರೆ. ಆದ ಕಾರಣ ಈ ತಂಡ ಮದರ್ಸ್ ಡೇ ಅಂಗವಾಗಿ ಸುಮಾರು 100ಕ್ಕೂ ಹೆಚ್ಚು ತಾಯಂದಿರ ಕೈಯಲ್ಲಿ ಸಸಿಗಳನ್ನು ನೆಡಿಸಿ ತಾಯಂದಿರ ದಿನ ಆಚರಣೆ ಮಾಡಿದ್ದು ವಿಶೇಷವಾಗಿದೆ.
ಮದರ್ಸ್ ಡೇ - ಗಿಡ ಕೊಟ್ಟು ಆಚರಣೆ ಟೀಂ ಸ್ಮೈಲ್ ಮತ್ತು ಶಂಕರ ಜ್ಯೋತಿ ನಗರದ ಚಿಕ್ಕ ಮಕ್ಕಳು ಸೇರಿಕೊಂಡು ಸುತಗಟ್ಟಿಯ ಶಂಕರಜ್ಯೋತಿ ನಗರದಲ್ಲಿ ಸಮಸ್ತ ಜನತೆ ತಾಯಂದಿರ ದಿನಾಚರಣೆಯಲ್ಲಿ ಭಾಗವಹಿಸಿ ಈ ದಿನಕ್ಕೆ ಮೆರಗು ತಂದಿದ್ದಾರೆ. ಟೀಂ ಸ್ಮೈಲ್ ಯುವಕರು ಎಲ್ಲ ತಾಯಂದಿರಿಗೆ ಉಡುಗೊರೆಯಾಗಿ ಸಸಿಗಳನ್ನು ನೀಡಿ ಅವರಿಂದ ಪ್ರತಿಯೊಬ್ಬರ ಮನೆ ಮುಂದೆ ಮತ್ತು ಗಾರ್ಡನ್ಗಳಲ್ಲಿ ಗಿಡಗಳನ್ನು ನೆಡಿಸಿರುವುದು ವಿಶೇಷವಾಗಿದೆ.
ಇದನ್ನೂ ಓದಿ:ಮಲೆಮಹದೇಶ್ವರ ಬೆಟ್ಟದ ಕಣಿವೆಗೆ ಉರುಳಿದ ಜೀಪ್.. ಓರ್ವ ಸಾವು, ಹಲವರಿಗೆ ಗಾಯ
ಕೊರೊನಾ ಸೋಂಕಿನಿಂದ ಆಮ್ಲಜನಕ ಸಿಗದೆ ಸಾವು ನೋವು ಹೆಚ್ಚಾಗುತ್ತಿದ್ದು, ಮುಂದೆ ಇಂತಹ ಸಮಸ್ಯೆ ಎದುರಾಗಬಾರದೆಂಬ ನಿಟ್ಟಿನಲ್ಲಿ ಈ ದಿನದ ನಿಮಿತ್ತ ಯುವಕರ ತಂಡ ಸಸಿಗಳನ್ನು ನೀಡಿ ಈ ಮಹತ್ತರ ಕಾರ್ಯ ಮಾಡಿ ಬೇರೆಯವರಿಗೂ ಮಾದರಿಯಾಗಿದ್ದಾರೆ.