ಧಾರವಾಡ : ಶಿಕ್ಷಣ ಇಲಾಖೆ ಡಿಡಿಪಿಐಗಳು ಕಡ್ಡಾಯವಾಗಿ ಪಾಠ ಮಾಡಬೇಕು. ಪ್ರತಿ ದಿನ ಕನಿಷ್ಠ ಎರಡು ಅಧಿಕಾರಿಗಳು ಶಾಲೆಗಳಿಗೆ ಹೋಗಬೇಕು. ಒಂದು ಶಾಲೆಯನ್ನು ಡಿಡಿಪಿಐಗಳು ದತ್ತು ಪಡೆಯಬೇಕು ಎಂದು ಶಿಕ್ಷಣ ಸಚಿವ ಸುರೇಶಕುಮಾರ ಹೇಳಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದತ್ತು ಪಡೆದ ಶಾಲೆಯಲ್ಲಿ ತಮ್ಮ ವಿಷಯದ ಪಾಠ ಮಾಡಬೇಕು. ಈ ಹಿಂದಿನ ತಮ್ಮ ವಿಷಯದ ಪಾಠ ಕಡ್ಡಾಯವಾಗಿ ಮಾಡಬೇಕು ಎಂದರು.
ಶಿಕ್ಷಣ ಸಚಿವ ಸಚಿವ ಸುರೇಶ್ ಕುಮಾರ್ ಮಾತನಾಡಿರುವುದು.. ಎಲ್ಲ ಮುಖ್ಯ ಶಿಕ್ಷಕರು ಸಹ ಇನ್ನು ಮುಂದೆ ತಮ್ಮ ಶಾಲೆಗಳಲ್ಲಿ ಪಾಠ ಮಾಡಬೇಕು. ಆಡಳಿತಕ್ಕೆ ಹೋದ ಬಳಿಕ ಬಹಳಷ್ಟು ಜನ ಪಾಠ ಮಾಡುವುದನ್ನು ಬಿಟ್ಟಿದ್ದಾರೆ. ಇನ್ನು ಮುಂದೆ ಕಡ್ಡಾಯವಾಗಿ ಪಾಠ ಮಾಡಲೇಬೇಕಾಗುತ್ತದೆ ಎಂದರು.
ಕಾರ್ಗಿಲ್ ಸ್ಥೂಪಕ್ಕೆ ಭೇಟಿ ನೀಡಿದ ಸಚಿವರು :ಬೆಳಗಾವಿ ವಿಭಾಗಮಟ್ಟದ ಡಿಡಿಪಿಐ ಅವರ ಸಭೆ ಬಳಿಕ ಸಚಿವ ಸುರೇಶ್ ಕುಮಾರ್ ನೇರವಾಗಿ ಕಾರ್ಗಿಲ್ ಸ್ತೂಪಕ್ಕೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು. ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರ ನೆನಪಿಗಾಗಿ ಕಾರ್ಗಿಲ್ ಸ್ತೂಪವನ್ನ ಧಾರವಾಡದಲ್ಲಿ ನಿರ್ಮಿಸಲಾಗಿದೆ.
ಸಚಿವ ಸುರೇಶ್ ಕುಮಾರ್ ಅವರಿಗೆ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಡಿಡಿಪಿಐ ಎಂ.ಎಲ್.ಹಂಚಾಟೆ ಸೇರಿದಂತೆ ಇಲಾಖೆ ಹಿರಿಯ ಅಧಿಕಾರಿಗಳು ಸಾಥ್ ನೀಡಿದರು.