ಧಾರವಾಡ:ಕೊರೊನಾ ವೈರಸ್ ಭೀತಿಯಿಂದ ಭಾರತವನ್ನು ಲಾಕ್ಡೌನ್ ಮಾಡಿದ್ದರಿಂದ ಮದ್ಯ ಮರಾಟವನ್ನು ಬಂದ್ ಮಾಡಲಾಗಿತ್ತು. ಇದೀಗ ಲಾಕ್ಡೌನ್ ಸಡಿಲಿಕೆ ಮಾಡಿರುವುದರಿಂದ ಮದ್ಯ ಮಾರಾಟಕ್ಕೂ ಅನುಮತಿ ನೀಡಲಾಗಿದೆ.
ಮದ್ಯ ಮಾರಾಟ ಆರಂಭ: ಸರತಿ ಸಾಲಿನಲ್ಲಿ ನಿಂತ ಮದ್ಯ ಪ್ರಿಯರು
ಧಾರವಾಡದಲ್ಲಿ ಮದ್ಯ ಮಾರಾಟ ಆರಂಭವಾಗಿದ್ದು, ಮದ್ಯ ಪ್ರಿಯರು ಬೆಳಗ್ಗೆ ಬೇಗನೆ ಬಂದು ನಗರದಲ್ಲಿ ಬಹುತೇಕ ಎಂಎಸ್ಐಎಲ್ ಹಾಗೂ ಸಿಎಲ್ 2 ವೈನ್ ಶಾಪ್ ಮುಂಭಾಗದಲ್ಲಿ ಹಾಕಿರುವ ಬ್ಯಾರಿಕೇಡ್ನಲ್ಲಿ ಸಾಲಿನಲ್ಲಿ ನಿಂತಿದ್ದಾರೆ.
ಸರತಿ ಸಾಲಿನಲ್ಲಿ ನಿಂತ ಮದ್ಯ ಪ್ರಿಯರು
ಬೆಳಗ್ಗೆ 9 ರಿಂದ ಸಂಜೆ 7 ರವರೆಗೆ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ ಮದ್ಯ ಪ್ರಿಯರು ಬೆಳಗ್ಗೆ ಬೇಗನೆ ಬಂದು ನಗರದಲ್ಲಿ ಬಹುತೇಕ ಎಂಎಸ್ಐಎಲ್ ಹಾಗೂ ಸಿಎಲ್ 2 ವೈನ್ ಶಾಪ್ ಮುಂಭಾಗದಲ್ಲಿ ಹಾಕಿರುವ ಬ್ಯಾರಿಕೇಡ್ನಲ್ಲಿ ಸಾಲಿನಲ್ಲಿ ನಿಂತಿದ್ದಾರೆ.
ಸಾಮಾಜಿಕ ಅಂತರ ಕಾಪಾಡಿಕೊಂಡು ಮದ್ಯ ಮಾರಾಟ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಆದೇಶಿಸಿದೆ. ಇನ್ನು ಈ ಹಿನ್ನೆಲೆ ಮದ್ಯ ಮಾರಾಟ ಮಾಡಲು ನಿರ್ಧರಿಸಲಾಗಿದ್ದು, ನಿನ್ನೆಯಿಂದ ಅನೇಕ ವೈನ್ ಶಾಪ್ಗಳು ಸಹ ತಯಾರಿ ನಡೆಸಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ದೃಷ್ಟಿಯಿಂದ ಬ್ಯಾರಿಕೇಡ್ ಹಾಕಿವೆ.