ಧಾರವಾಡ:ನಾನು ಅನೇಕ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದೀನಿ ಒಂದು ಶತಮಾನದಲ್ಲಿ ಇಷ್ಟು ಭೀಕರ ಪ್ರವಾಹ ಬಂದಿರೋದನ್ನು ನಾನು ಕಂಡಿಲ್ಲ ಎಂದು ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಧಾರವಾಡದಲ್ಲಿ ಹೇಳಿದ್ದಾರೆ.
ನಾವು ಅನೇಕ ಪ್ರತಿಭಟನೆಗಳನ್ನು ಮಾಡಿದ್ದೀವಿ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಕೇಳಿದೀವಿ. 25 ಜನ ಸಂಸದರು ಇದ್ದಾರೆ. ಜನರು ಬೀದಿಗೆ ಬಂದಿದ್ದಾರೆ. ಏನಾದ್ರು ಮಾಡಿ ಜನರಿಗೆ ಪರಿಹಾರ ಕೊಡಿಸಬೇಕು ಎಂದು ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಆಗ್ರಹಿಸಿದರು.
ಕೇಂದ್ರದಿಂದ ಪರಿಹಾರ ಸಿಗಲಿದೆ ಎಂಬ ನೀರಿಕ್ಷೆ ಇದೆ.. ಕಾಂಗ್ರೆಸ್ ಶಾಸಕಿ ಸೌಮ್ಯಾರೆಡ್ಡಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಹಣ ಇಲ್ವಂತೆ. ಅದರ ಬಗ್ಗೆ ನಾನೇನೂ ಹೇಳಲ್ಲ, ಅವರಿಗೆ ಜವಾಬ್ದಾರಿ ಇದೆ. ನಾವು ಬಹಳ ನಂಬಿಕೆ ಇಟ್ಕೊಂಡಿದ್ದೀವಿ. ಸರ್ಕಾರ ಬಂದು ಎರಡು ತಿಂಗಳಾಗಿದೆ. ನಾವು ಒತ್ತಾಯ ಮಾಡ್ತಿದ್ದೀವಿ.
ಅಧಿವೇಶನ ಅಕ್ಟೋಬರ್ 10ರಂದು ಶುರುವಾಗುತ್ತೆ. ಇಷ್ಟು ದಿನ ಎಲ್ಲರೂ ಸಹಾಯ ಮಾಡಿದ್ದಾರೆ. ಈಗ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಅದರ ಜವಾಬ್ದಾರಿ ಇದೆ. ನಾವು ಪ್ರತಿಭಟನೆ ನಡೆಸಿದ್ದಾಯ್ತು. ಸರ್ಕಾರ ಪರಿಹಾರ ನೀಡುವವರೆಗೂ ಅದು ನಿಲ್ಲುವುದಿಲ್ಲ. ಆದಷ್ಟು ಬೇಗ ಸರ್ಕಾರ ಪರಿಹಾರ ನೀಡಲಿ. ಜನರಿಗೆ ನ್ಯಾಯ ಸಿಗಲಿ ಎಂದು ಧಾರವಾಡದಲ್ಲಿ ಸುದ್ದಿಗಾರರ ಪ್ರಶ್ನೆಗೆ ಶಾಸಕಿ ಸೌಮ್ಯ ರೆಡ್ಡಿ ಉತ್ತರಿಸಿದರು.