ಕರ್ನಾಟಕ

karnataka

ETV Bharat / state

ನೃಪತುಂಗ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ.. ವೈರಲ್ ವಿಡಿಯೋದಿಂದ ಜನರಲ್ಲಿ ಹೆಚ್ಚಿದ ಆತಂಕ

ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಜನರಲ್ಲಿ ಭೀತಿ ಸೃಷ್ಟಿಸಿದೆ.

By

Published : Sep 17, 2021, 7:23 AM IST

ಚಿರತೆ
ಚಿರತೆ

ಹುಬ್ಬಳ್ಳಿ: ಬುಧವಾರ ರಾತ್ರಿ ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಭೀತಿಯನ್ನುಂಟು ಮಾಡಿದೆ. ಅಲ್ಲದೇ, ಈ ಹಿಂದೆ ಚಿರತೆಯು ವ್ಯಕ್ತಿಯ ಮೇಲೆರಗಿದ್ದ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ. ಇದರಿಂದಾಗಿ ಜನರು ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ.

ವ್ಯಕ್ತಿಯ ಮೇಲೆರಗಿದ ಚಿರತೆ

ಹುಬ್ಬಳ್ಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ. ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಜನರಲ್ಲಿ ಭಯವನ್ನು ಸೃಷ್ಟಿಸಿದೆ. ಇದರ ಜತೆಗೆ ಕೆಲ ತಿಂಗಳ ಹಿಂದೆ ಚಿರತೆ ವ್ಯಕ್ತಿಯ ಮೇಲೆ ದಾಳಿ ಮಾಡಿರುವ ವಿಡಿಯೋ ವೈರಲ್ ಆಗ್ತಿದೆ. ವೈರಲ್ ವಿಡಿಯೋದಲ್ಲಿ ಸೆರೆಯಾಗಿರುವ ದೃಶ್ಯ ಎಲ್ಲಿ ನಡೆದಿರುವ ಘಟನೆಯದ್ದು ಎಂದು ತಿಳಿದು ಬಂದಿಲ್ಲ.

ಇದನ್ನೂ ಓದಿ: ಅಪಘಾತದಲ್ಲಿ ಮೃತಪಟ್ಟ ಪ್ರೇಮಿ: ಮನನೊಂದು ನೇಣಿಗೆ ಶರಣಾದ ಯುವತಿ...!

ABOUT THE AUTHOR

...view details