ಧಾರವಾಡ: ಐಪಿಎಲ್ ಪಂದ್ಯಗಳು ಅಂತಿಮ ಘಟ್ಟಕ್ಕೆ ಬಂದು ತಲುಪಿವೆ. ಇಂದು ಆರ್ಸಿಬಿ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಪಂದ್ಯ ನಡೆಯಲಿದೆ. ಹಾಗಾಗಿ ಧಾರವಾಡದಲ್ಲಿ ಆರ್ಸಿಬಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಆರ್ಸಿಬಿ ಗೆಲ್ಲಿಸುವಂತೆ ಕೊಹ್ಲಿ ಹೆಸರಿನಲ್ಲಿ ದುರ್ಗಾ ದೇವಿಗೆ ವಿಶೇಷ ಪೂಜೆ ಧಾರವಾಡದ ದುರ್ಗಾ ದೇವಿಗೆ ವಿರಾಟ್ ಕೊಹ್ಲಿ ಅಂಡ್ ಟೀಮ್ ಹೆಸರಿನಲ್ಲಿ 101 ರೂ. ಅಭಿಷೇಕ ಪೂಜಾ ಮಾಡಿಸಿದ್ದಾರೆ. ಈ ರಸೀದಿ ಇದೀಗ ಮತ್ತೊಮ್ಮೆ ವೈರಲ್ ಆಗಿದೆ.
101 ರೂ.ಗಳ ವಿಶೇಷ ಪೂಜೆ ನೆರವೇರಿಸಿ ಆರ್ಸಿಬಿ ಪಂದ್ಯ ಗೆಲ್ಲಿಸುವಂತೆ ಆರ್ಸಿಬಿ ಅಭಿಮಾನಿಗಳು ಪೂಜೆ ಮಾಡಿಸಿದ್ದಾರೆ. ಕಳೆದ ಶನಿವಾರವೂ ಧಾರವಾಡದ ಪ್ರಸಿದ್ಧ ನುಗ್ಗಿಕೇರಿ ಆಂಜನೇಯನಿಗೆ ಅಭಿಮಾನಿಗಳು ಪೂಜೆ ಸಲ್ಲಿಸಿದ್ದರು. ಆ ಪಂದ್ಯದಲ್ಲಿ ಆರ್ಸಿಬಿ ಜಯಿಸಿತ್ತು.
ನವರಾತ್ರಿ ಹಿನ್ನೆಲೆ ದುರ್ಗಾ ದೇವಿಗೆ ಪಂದ್ಯ ಗೆಲ್ಲಿಸುವಂತೆ ಆರ್ಸಿಬಿ ಅಭಿಮಾನಿಗಳು ಪೂಜೆ ಮಾಡಿಸಿದ್ದು, ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದು ಬೀಗುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ. ಆದ್ರೆ ಪೂಜೆ ಸಲ್ಲಿಸಿದ ರಸೀದಿ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.