ಹುಬ್ಬಳ್ಳಿ: ಸಾಧನೆ ಮಾಡಬೇಕು ಎಂಬ ಅದಮ್ಯ ಛಲದ ಜೊತೆಗೆ ಕಂಡಿರುವ ಕನಸು ನನಸಾಗಿಸೋಕೆ ಆತ್ಮವಿಶ್ವಾಸದ ಹೋರಾಟ ನಡೆಸಿದಲ್ಲಿ ಎಂಥವರೂ ಇತಿಹಾಸ ಸೃಷ್ಟಿಸಬಹುದಂತೆ. ಇಲ್ಲೊಂದು ಗುಡಿಸಲಲ್ಲಿ ಅರಳಿದ ಪ್ರತಿಭೆ ದೇಶದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಲು ಹಾತೊರಿಯುತ್ತಿದ್ದಾಳೆ.
ಜಗ್ಲಿಂಗ್ ಮತ್ತು ಫ್ಲೈರ್ ಗೇಮ್ ಸಾಧಕಿ ಕವಿತಾ ಕುಂದಗೋಳ ತಾಲೂಕಿನ ಬೆಟದೂರು ಗ್ರಾಮದ ಕವಿತಾ ಮೇದಾರ ಎಂಬ ಯುವತಿ ಇದುವರೆಗೂ ಯಾವ ಮಹಿಳೆಯೂ ಮಾಡಿರದ ಸಾಧನೆ ಮಾಡಲು ಹೊರಟಿದ್ದಾಳೆ. ಸಾಧನೆ ಸಾಕಾರಕ್ಕಾಗಿ ಇದೀಗ ಸ್ವಿಟ್ಜರ್ಲ್ಯಾಂಡ್ ದೇಶದಲ್ಲಿ ಭಾರತ ದೇಶದ ಸ್ಪರ್ಧಿಯಾಗಿ ಜಗ್ಲಿಂಗ್ ಮತ್ತು ಫ್ಲೈರ್ ಗೇಮ್ನಲ್ಲಿ ತನ್ನದೇ ಚಾಣಾಕ್ಷತನ ತೊರಲಿದ್ದಾಳೆ. ಮೂಲತಃ ರೈತನ ಮಗಳಾದ ಕವಿತಾ ಪ್ರಾಥಮಿಕ ಶಿಕ್ಷಣವನ್ನು ತಂದೆ ತಾಯಿ ಆಶ್ರಯದಲ್ಲಿ ಪೂರೈಸಿ ಹಾಗೂ ಅಜ್ಜಿ ಆಶ್ರಯದಲ್ಲಿ ಬಿ.ಕಾಂ ಪದವಿ ಶಿಕ್ಷಣ ಪೂರೈಸಿದರು.
ಓದಿ: ಅಗಾಧ ನೆನಪಿನ ಶಕ್ತಿಯೇ ಈತನಿಗೆ ವರದಾನ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದ ಹುಬ್ಬಳ್ಳಿಯ ಪೋರ
ಬಳಿಕ ಪುಣೆಯಲ್ಲಿ ಜಗ್ಲಿಂಗ್ ಮತ್ತು ಫ್ಲೈರ್ ಗೇಮ್ ತರಬೇತಿ ಪಡೆದು ಇಡೀ ಭಾರತ ದೇಶ ಸುತ್ತಿ ಪ್ರದರ್ಶನ ನೀಡಿದ್ದಾಳೆ. ಸದ್ಯ ಇದೇ ಫ್ಲೈರ್ ಗೇಮ್ ಮತ್ತು ಜಗ್ಲಿಂಗ್ನಲ್ಲಿ ವರ್ಲ್ಡ್ ರೆಕಾರ್ಡ್ ಮಾಡಲು ಕವಿತಾ ಮೇದಾರ್ಗೆ ಸ್ವಿಟ್ಜರ್ಲ್ಯಾಂಡ್ ದೇಶಕ್ಕೆ ಹೋಗುವ ಅವಕಾಶ ಸಿಕ್ಕಿದೆ. ಆದರೆ, ಅರ್ಥಿಕ ಪರಿಸ್ಥಿತಿ ಆ ಅವಕಾಶಕ್ಕೆ ಮುಳುವಾಗಿ ಪರಿಣಮಿಸಿದೆ. ಆದ್ದರಿಂದ ಸಹಾಯ ಹಸ್ತ ನೀಡುವಂತೆ ಎಲ್ಲರಲ್ಲಿ ಮನವಿ ಮಾಡಿದ್ದಾಳೆ.
ಇನ್ನೊಂದು ವಿಶೇಷ ಎಂದರೆ, ಇಡೀ ಭಾರತದಲ್ಲೇ ಜಗ್ಲಿಂಗ್ ಮತ್ತು ಫ್ಲೈರ್ ಗೇಮ್ ಆಡುವ ಏಕೈಕ ಮಹಿಳಾ ಪ್ರತಿಭೆ ಕವಿತಾ ಮೇದಾರ ಎಂಬುದು ನಮ್ಮ ಭಾರತದ ಹೆಮ್ಮೆಯ ವಿಷಯ. ಸದ್ಯ ಸಾಧನೆಯ ತವಕದಲ್ಲಿರುವ ಕವಿತಾ ಮೇದಾರಗೆ ಸ್ವಿಟ್ಜರ್ಲ್ಯಾಂಡ್ ದೇಶದಲ್ಲಿ ತೆರಳಿ ವರ್ಲ್ಡ್ ರೆಕಾರ್ಡ್ ಮಾಡಲು ಹಣದ ಅವಶ್ಯಕತೆ ಎದುರಾಗಿದೆ. ಹೀಗಾಗಿ ಅವರಿಗೆ ನೆರವಿನ ಹಸ್ತದ ಅವಶ್ಯಕತೆ ಇದೆ.