ಕರ್ನಾಟಕ

karnataka

ETV Bharat / state

ಮಹಾರಾಷ್ಟ್ರದ ರಾಜಕಾರಣಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಗಡಿ ವಿವಾದ ಸೃಷ್ಟಿಸುತ್ತಾರೆ: ಜಗದೀಶ್​ ಶೆಟ್ಟರ್ - karnataka border dispute

ಮಹಾರಾಷ್ಟ್ರದಲ್ಲಿ ಬೇರೆ ವಿಚಾರ ಬಂದಾಗ ಮಹಾರಾಷ್ಟ್ರ ರಾಜಕಾರಣಿಗಳು ಹಾಗೂ ಇಲ್ಲಿಯ ಎಂಇಎಸ್ ನವರು ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಗಡಿ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಹೇಳಿದರು.

KN_DWD
ಜಗದೀಶ್​ ಶೆಟ್ಟರ್

By

Published : Nov 29, 2022, 4:01 PM IST

ಧಾರವಾಡ: ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ವಿವಾದ ಬಹಳ‌ ವರ್ಷಗಳಿಂದ ನಡೆದು ಬಂದಿದೆ. ಈ ಬಗ್ಗೆ ಬೇರೆ ಬೇರೆ ಕಮಿಷನ್ ಹಾಗೂ ವರದಿಗಳಾಗಿವೆ ಎಂದು ಧಾರವಾಡದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾಜನ್ ಎಂಬ ವರದಿ ಕೂಡಾ ಕೊಟ್ಟಾಗಿದೆ.‌ ಎರಡು ರಾಜ್ಯಗಳು ಆ ಸಂದರ್ಭದಲ್ಲಿ ಮಹಾಜನ್ ವರದಿ ಒಪ್ಪಿಕೊಂಡಿವೆ. ವರದಿಯಂತೆ ಬೆಳಗಾವಿ ಕರ್ನಾಟಕದಲ್ಲೇ ಉಳಿಯಲಿದೆ, ಮಹಾಜನ್ ವರದಿ ಫೈನಲ್ ಆಗಿದೆ. ಮಹಾರಾಷ್ಟ್ರದಲ್ಲಿ ಬೇರೆ ವಿಚಾರ ಬಂದಾಗ ಮಹಾರಾಷ್ಟ್ರ ರಾಜರಣಿಗಳು ಹಾಗೂ ನಮ್ಮಲ್ಲಿ ಎಂಇಎಸ್ ನವರು ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಹೀಗೆ ಮಾಡುತ್ತಿವೆ ಎಂದರು.

ತಾವು ಬೆಳೆಯಲು ಈ ರೀತಿ ಕುತಂತ್ರ ಮಾಡುವ ಮೂಲಕ ಮಹಾರಾಷ್ಟ್ರ ರಾಜ್ಯದ ಮುಖಾಂತರ ಗಡಿ ಬಗ್ಗೆ ಮಾತನಾಡಿಸಿ ಮರಾಠಿ ಹಾಗೂ ಕನ್ನಡಿಗರ ಮಧ್ಯದಲ್ಲಿ ವಿಘಟನೆ ಮಾಡುತ್ತಿದ್ದಾರೆ. ಈಗ ಮರಾಠಿಗರು ಹಾಗೂ ಕನ್ನಡಿಗರು ಅರ್ಥ ಮಾಡಿಕೊಂಡಿದ್ದಾರೆ, ಸೌಹಾರ್ದ ವಾತಾವರಣ ಇದೆ. ಪದೇ ಪದೇ ಕೆದಕುವ ಕೆಲಸ ಮಾಡಬೇಕಿಲ್ಲ,‌ ಈ ಬಾರಿ ಮಹಾರಾಷ್ಟ್ರದ ರಾಜಕಾರಣಿಗಳೇ ಕೆದಕುವ ಕೆಲಸ ಮಾಡಿದರು.

ಸುಪ್ರೀಂ ಕೋರ್ಟ್​ಗೆ ಹೋಗುವ ಅವಶ್ಯಕತೆ‌ ಇರಲಿಲ್ಲ, ಅಲ್ಲಿ ವಿಚಾರಣೆ ಹಂತದಲ್ಲಿ ಇದೆ. ರಾಜ್ಯ ಸರ್ಕಾರ ಕೂಡ ವಕೀಲರನ್ನು ನೇಮಕ ಮಾಡಿದೆ, ಮಹಾರಾಷ್ಟ್ರ ಕೂಡಾ ಅಲ್ಲಿ ಸಮಸ್ಯೆ ಇದ್ದರೆ ಕೋರ್ಟ್ ಎದುರು ಹೇಳಲಿ ಬೀದಿಗೆ ಬಂದು ಕನ್ನಡಿಗರನ್ನು ಕೆದಕುವ‌ ಕೆಲಸ ಕಾಲು ಕೆದರಿ ಜಗಳ ತೆಗೆಯುವುದು ಬೇಡ ಎಂದು ಹೇಳಿದರು.

ಇನ್ನು ಉದ್ರಿಕ್ತ ವಾತಾವರಣ ನಿರ್ಮಾಣ ಮಾಡುವುದನ್ನ ನಿಲ್ಲಿಸಿ ಎಂದು ಎಚ್ಚರಿಕೆ ಕೊಡುತ್ತೇನೆ. ಪ್ರತಿ ಬಾರಿ ಎರಡು ಕಡೆ ಒಂದೇ ಸರ್ಕಾರ ಇದೆ ಎಂದು ಹೇಳುವುದು ಬೇಡ. ಈ ಹಿಂದೆ ಹಲವು ಬಾರಿ ಕಾಂಗ್ರೆಸ್ ಸರ್ಕಾರ ಇತ್ತು, ಆಗ‌ಲೂ ಗಡಿ ತಂಟೆ ಇತ್ತು. ಇದು ಮಹಾರಾಷ್ಟ್ರ ರಾಜಕಾರಣಿಗಳಿಗೆ ಇದು ಹ್ಯಾಬಿಟ್ ಆಗಿದೆ. ತಮ್ಮಲ್ಲಿ ಸಮಸ್ಯೆಯಾದರೆ ಗಮನ ಬೇರೆ ಕಡೆ ತೆಗೆದುಕೊಂಡು ಹೋಗಲು ಗಡಿ ವಿಷಯ ತೆಗೆಯುತ್ತಾರೆ. ಜತ್ತ ತಾಲೂಕಿಗೆ ನಾನು ಹಲವು ಬಾರಿ ಹೋಗಿದ್ದೇನೆ, ಅಲ್ಲಿಯ ಜನ ಕನ್ನಡವನ್ನೇ ಮಾತನಾಡ್ತಾರೆ.‌ ಅವರೆಲ್ಲ ನಮ್ಮ ರಾಜ್ಯಕ್ಕೆ ಬರುವ ಮಾತನ್ನು ಹೇಳಿದ್ದಾರೆ ಎಂದ.

ಬಳಿಕ ಬಿಜೆಪಿ ಕಾರ್ಯಕ್ರಮದಲ್ಲಿ ರೌಡಿ ಶೀಟರ್​ಗಳನ್ನು ಸಭೆಗೆ ಕರೆಸಿರೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯಾವುದೇ ಸಮಾರಂಭದಲ್ಲಿ ಹೋದಾಗ ನಮ್ಮ‌‌ ಪಕ್ಕ ಯಾರೋ ಬಂದು ಕುಳಿತರೆ ಗೊತ್ತಾಗಲ್ಲ. ಸೈಲೆಂಟ್ ಸುನೀಲ್ ಪಕ್ಷಕ್ಕೆ ಸೇರ್ಪಡೆ ಬಗ್ಗೆ ನನಗೆ ಮಾಹಿತಿ‌ ಇಲ್ಲಾ. ಎಂಪಿ ಅವರ ಪಕ್ಕ ಕುಳಿತಿರಬಹುದು, ಅಲ್ಲಿ ನಮ್ಮ ಪಕ್ಷದ ಕಾರ್ಯಕ್ರಮ ಕೂಡಾ ಇರಲಿಲ್ಲ, ಯಾವುದೋ ಒಂದು ಕಾರ್ಯಕ್ರಮ ಎಂದರು. ಸಿದ್ದರಾಮಯ್ಯ ಅವರ ಪಕ್ಷದಲ್ಲಿ ಡಿ ಕೆ ಶಿವಕುಮಾರ್ ಏನಿದ್ದಾರೆ..? ಅವರೂ ಬೇಲ್ ಮೇಲೆ ಹೊರಗೆ ಇದ್ದಾರಲ್ಲಾ ಎಂದು ಶೆಟ್ಟರ್​ ಪ್ರಶ್ನಿಸಿದರು.

ಬಳಿಕ ರಾಜ್ಯದಲ್ಲಿ ಮತಾಂತರ ವಿಚಾರಕ್ಕೆ ಮಾತನಾಡಿದ ಅವರು, ಕೆಲವು ಜಿಲ್ಲೆಗಳಿಂದ ಲಿಂಗಾಯತರು‌ ಮತಾಂತರವಾದ ಬಗ್ಗೆ ವರದಿ ಬಂದಿದೆ. ಅದಕ್ಕಾಗಿ ವೀರಶೈವ ಲಿಂಗಾಯತ ಮಹಾಸಭಾ ಇದನ್ನು ತಡೆಯುವುದು ಹಾಗೂ ಜಾಗೃತಿ ಕೆಲಸ ಮಾಡಬೇಕು ಎಂದರು.

ಇದನ್ನೂ ಓದಿ:ಸೈಲೆಂಟ್ ಸುನೀಲ್ ಬಿಜೆಪಿ ಸೇರ್ಪಡೆಗೆ ಅವಕಾಶವಿಲ್ಲ : ನಳಿನ್‍ಕುಮಾರ್ ಕಟೀಲ್

ABOUT THE AUTHOR

...view details