ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಮನುಷ್ಯರಷ್ಟೇ ಅಲ್ಲ ಕತ್ತೆ - ಕುದುರೆ ಕೂಡ ಬರಬಹುದು! - Minister Umesh katti

ಕಳೆದ ನಾಲ್ಕು ದಿನಗಳ ಹಿಂದೆ ವಿಮಾನ ನಿಲ್ದಾಣಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಸಚಿವ ಉಮೇಶ ಕತ್ತಿ ಬೆಂಗಳೂರಿನಿಂದ ಆಗಮಿಸಿದ್ದರು. ಈ ಸಮಯದಲ್ಲೂ ಕೂಡ ಕುದುರೆಯೊಂದು ಆರಾಮಾಗಿ ಹುಲ್ಲನ್ನು ತಿನ್ನುತ್ತಾ ಓಡಾಡುತ್ತಿತ್ತು. ಇದನ್ನೆಲ್ಲಾ ಗಮನಿಸಿದರೆ ಇಲ್ಲಿ ಎಷ್ಟರ ಮಟ್ಟಿಗೆ ಭದ್ರಾತಾ ವ್ಯವಸ್ಥೆ ಇದೆ ಎನ್ನುವುದನ್ನು ಊಹಿಸಿ ಕೊಳ್ಳಬಹುದಾಗಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಮನುಷ್ಯರಷ್ಟೇ ಅಲ್ಲ ಕತ್ತೆ - ಕುದುರೆ ಕೂಡ ಬರಬಹುದು
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಮನುಷ್ಯರಷ್ಟೇ ಅಲ್ಲ ಕತ್ತೆ - ಕುದುರೆ ಕೂಡ ಬರಬಹುದು

By

Published : Nov 15, 2021, 1:04 PM IST

ಹುಬ್ಬಳ್ಳಿ: ವಿಮಾನ ನಿಲ್ದಾಣ ಅಂದರೆ ಭದ್ರತೆಗೆ ಪ್ರಮುಖ ಆದ್ಯತೆ ಇದ್ದೇ ಇರುತ್ತೆ‌.‌ ಆದ್ರೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತ್ರ ಇದು ತದ್ವಿರುದ್ಧವಾಗಿದೆ. ವಿಮಾನ ನಿಲ್ದಾಣ ಒಳಗಡೆ ಬೆಳೆದಿರುವ ಕಸವನ್ನು ಮೆಯಲು ಕುದುರೆ ಹಾಗೂ ಕತ್ತೆಗಳು(Horses and donkeys) ಬರುತ್ತಿವೆ.

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಮನುಷ್ಯರಷ್ಟೇ ಅಲ್ಲ ಕತ್ತೆ - ಕುದುರೆ ಕೂಡ ಬರಬಹುದು

ಶುಕ್ರವಾರ ರಾತ್ರಿ ಹುಬ್ಬಳ್ಳಿಯಲ್ಲಿ ಈ ಘಟನೆ ನಡೆದಿದೆ. ಕಳೆದ ನಾಲ್ಕು ದಿನಗಳ ಹಿಂದೆ ವಿಮಾನ ನಿಲ್ದಾಣಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ(Opposition leader Siddaramaiah) ಹಾಗೂ ಸಚಿವ ಉಮೇಶ ಕತ್ತಿ (Minister Umesh katti) ಬೆಂಗಳೂರಿನಿಂದ ಆಗಮಿಸಿದ್ದರು. ಈ ಸಮಯದಲ್ಲೂ ಕೂಡ ಕುದುರೆಯೊಂದು ಆರಾಮಾಗಿ ಹುಲ್ಲು ತಿನ್ನುತ್ತಾ ಓಡಾಡುತ್ತಿರುವ ದೃಶ್ಯ ಕಂಡು ಬಂತು.

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಮನುಷ್ಯರಷ್ಟೇ ಅಲ್ಲ ಕತ್ತೆ - ಕುದುರೆ ಕೂಡ ಬರಬಹುದು

ಇದನ್ನೂ ಓದಿ:ತಾವರೆಗಿಡ ಹಾಕಲು ಹೋದ ವಿದ್ಯಾರ್ಥಿನಿ ಕೆರೆಯಲ್ಲಿ ಮುಳುಗಿ ಸಾವು

ಇದನ್ನೆಲ್ಲಾ ಗಮನಿಸಿದರೆ ಹುಬ್ಬಳ್ಳಿಯ ವಿಮಾನ ನಿಲ್ದಾಣದ ಭದ್ರತಾ ವೈಫಲ್ಯ ಮೆಲ್ನೋಟಕ್ಕೆ ಕಂಡು ಬರುತ್ತಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ದಳದ ಸಿಬ್ಬಂದಿ ವಿಮಾನ ನಿಲ್ದಾಣದಲ್ಲಿ ಬಂದೋಬಸ್ತ್ ನಲ್ಲಿ ಇದ್ದರೂ ಕುದುರೆಗಳು ವಿಮಾನ ನಿಲ್ದಾಣದ ಒಳಗಡೆ ಹೇಗೆ ಬರುತ್ತಿವೆ ಎಂಬುದು ಈಗ ಚರ್ಚೆಗೆ ಕಾರಣವಾಗಿದೆ.

ABOUT THE AUTHOR

...view details