ಕರ್ನಾಟಕ

karnataka

ETV Bharat / state

ಆಯುಷ್ಮಾನ್‌ ಭಾರತ ಆರೋಗ್ಯ ಯೋಜನೆಯಲ್ಲಿ ಹುಬ್ಬಳ್ಳಿ ಕಿಮ್ಸ್ ರಾಜ್ಯಕ್ಕೆ ಪ್ರಥಮ

ಕೊರೊನಾ ಸಂದರ್ಭದಲ್ಲಿ ಸೋಂಕಿತ ಮಹಿಳೆಯರಿಗೆ ಯಶಸ್ವಿ ಹೆರಿಗೆ, ಕೋವಿಡ್ ಸೋಂಕಿತರಿಗೆ ಡಯಾಲಿಸಿಸ್ ಸೇರಿದಂತೆ ಸಾಕಷ್ಟು ಸಾಧನೆ ಮಾಡಿದ ಕಿಮ್ಸ್ ರಾಜ್ಯದಲ್ಲಿಯೇ ಅಗ್ರಗಣ್ಯ ಸ್ಥಾನವನ್ನು ಪಡೆದಿದೆ.

hublis-kims
ಹುಬ್ಬಳ್ಳಿ ಕಿಮ್ಸ್

By

Published : Nov 26, 2020, 2:32 PM IST

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ಯೋಜನೆ ಜಾರಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದು, ಕಿಮ್ಸ್ ಆಸ್ಪತ್ರೆಯ ಗೌರವ ಇಮ್ಮಡಿಯಾಗಿದೆ.

ಕೊರೊನಾ ಸಂದರ್ಭದಲ್ಲಿ ಸೋಂಕಿತ ಮಹಿಳೆಯರಿಗೆ ಯಶಸ್ವಿ ಹೆರಿಗೆ, ಕೊರೊನಾ ಸೋಂಕಿತರಿಗೆ ಡಯಾಲಿಸಿಸ್ ಸೇರಿದಂತೆ ಸಾಕಷ್ಟು ಸಾಧನೆ ಮಾಡಿದ ಕಿಮ್ಸ್ ರಾಜ್ಯದಲ್ಲಿಯೇ ಅಗ್ರಗಣ್ಯ ಸ್ಥಾನವನ್ನು ಪಡೆದಿದೆ.

ಹುಬ್ಬಳ್ಳಿ ಕಿಮ್ಸ್ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವ ಕುರಿತು ಮಾತನಾಡಿದ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ

2020 ಏಪ್ರಿಲ್‌ ತಿಂಗಳಿನಿಂದ ನ.12ರ ವರೆಗೆ ಎಬಿಎಆರ್‌ಕೆ ಯೋಜನೆಯಡಿ 5,741 ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ರಾಜ್ಯದಲ್ಲಿಯೇ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. 4,522 ರೋಗಿಗಳಿಗೆ ಚಿಕಿತ್ಸೆ ನೀಡಿರುವ ಮೈಸೂರಿನ ಕೃಷ್ಣರಾಜೇಂದ್ರ ಆಸ್ಪತ್ರೆ ದ್ವಿತೀಯ ಸ್ಥಾನದಲ್ಲಿದೆ. ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳನ್ನು ಕೂಡ ಹಿಂದಿಟ್ಟು ಕಿಮ್ಸ್ ದಾಖಲೆ ನಿರ್ಮಾಣ ಮಾಡಿದೆ.

ABOUT THE AUTHOR

...view details