ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಹೀಗಾಗಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಜಿಲ್ಲಾಡಳಿತ ಜಾತ್ರೆ, ಸಭೆ ಸಮಾರಂಭಗಳನ್ನ ರದ್ದುಗೊಳಿಸಿದೆ.
ಆದ್ರೆ ಜಿಲ್ಲಾಡಳಿತದ ನಿಷೇಧದ ಮಧ್ಯೆಯೂ ಹುಬ್ಬಳ್ಳಿಯ ಗಾಳಿ ದುರ್ಗಮ್ಮ ದೇವಿಯ ಜಾತ್ರೆಯ ಅಂಗವಾಗಿ ಭಕ್ತರು ದೇವಿಯ ದರ್ಶನಕ್ಕೆ ಮುಗಿಬಿದ್ದಿದ್ದಾರೆ. ಪೊಲೀಸರು ದೇವಾಲಯದ ಸುತ್ತಲೂ ಪಹರೆ ನಿಂತ ಪರಿಣಾಮ ಭಕ್ತರು ರಸ್ತೆಯಲ್ಲಿ ನಿಂತು ಹಣ್ಣು, ಕಾಯಿ ಒಡೆದು ದೇವಿಗೆ ಪೂಜೆ ಸಲ್ಲಿಕೆ ಮಾಡುತ್ತಿದ್ದಾರೆ.
ಜಾತ್ರೆ ರದ್ದು ಮಾಡಿದ್ರೂ ದೇವಿಯ ದರ್ಶನಕ್ಕೆ ಮುಗಿಬಿದ್ದ ಭಕ್ತರು ಪ್ರತಿ ವರ್ಷ ವಿಜೃಂಭಣೆಯಿಂದ ನಡೆಯುತ್ತಿದ್ದ ಗಾಳಿ ದುರ್ಗಮ್ಮ ದೇವಿಯ ಜಾತ್ರೆಯಂದು ಭಕ್ತರು ಹರಕೆ ತೀರಿಸಲು ವಿಶೇಷ ಪೂಜೆ ಸಲ್ಲಿಸ್ತಾ ಇದ್ರು. ಆದ್ರೆ ಈ ಬಾರಿ ದೇವಿಯ ಜಾತ್ರೆ ರದ್ದು ಮಾಡಿ ದೇವಿಯ ದರ್ಶನಕ್ಕೆ ಅವಕಾಶ ನೀಡದ ಪರಿಣಾಮ ಭಕ್ತರು ದರ್ಶನಕ್ಕೆ ಪರದಾಡುತ್ತಿದ್ದಾರೆ.
ದೇವಿಯ ಜಾತ್ರೆ ಬ್ಯಾನ್ ಮಾಡಿದ್ರೂ ದೇವಿಯ ದರ್ಶನಕ್ಕೆ ಭಕ್ತರು ಬರುತ್ತಿದ್ದು, ಪೊಲೀಸರು ದೇವಾಲಯದ ಸುತ್ತ ಬ್ಯಾರಿಕೇಡ್ ಹಾಕಿ ಭಕ್ತರು ಸೇರದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.