ಕರ್ನಾಟಕ

karnataka

ETV Bharat / state

ಸುವರ್ಣ ಮಹೋತ್ಸವ ಹೊಸ್ತಿಲಿನಲ್ಲಿ ಹುಬ್ಬಳ್ಳಿ ಕಾ ರಾಜಾ.. ಈ ಗಣಪತಿ ಪ್ರತಿಷ್ಠಾಪನೆ ಹಿನ್ನೆಲೆ ಏನು ಗೊತ್ತಾ? - ಸವಾಲಾಗಿ ಸ್ವೀಕರಿಸಿ ಹುಬ್ಬಳ್ಳಿ ಕಾ ರಾಜಾ ಪ್ರತಿಷ್ಟಾಪನೆ

ಹುಬ್ಬಳ್ಳಿ ದಾಜೀಬಾನಪೇಟೆಯ ಗಜಾನನ ಉತ್ಸವ ಸಮಿತಿ 1975 ರಿಂದಲೂ ಗಣೇಶ ಮೂರ್ತಿ ಪ್ರತಿಷ್ಠಾಪನೆ‌ ಮಾಡುತ್ತ ಬಂದಿದ್ದು, 48 ವರ್ಷಗಳಾಗಿವೆ. ಇನ್ನೆರಡು ವರ್ಷದಲ್ಲಿ ಸುವರ್ಣ ಮಹೋತ್ಸವದ ಆಚರಿಸಿಕೊಳ್ಳಲಿದೆ.

ಹುಬ್ಬಳ್ಳಿ ಕಾ ರಾಜಾ
ಹುಬ್ಬಳ್ಳಿ ಕಾ ರಾಜಾ

By ETV Bharat Karnataka Team

Published : Sep 27, 2023, 5:26 PM IST

Updated : Sep 27, 2023, 5:56 PM IST

ಹುಬ್ಬಳ್ಳಿ ಕಾ ರಾಜಾ ಗಣಪತಿ

ಹುಬ್ಬಳ್ಳಿ:ವಾಣಿಜ್ಯ ನಗರಿ ಹುಬ್ಬಳ್ಳಿಗೂ ಮುಂಬೈ ಗಣೇಶನಿಗೂ ಅವಿನಾಭಾವ ಸಂಬಂಧವಿದೆ.‌ ದೇಶದಲ್ಲಿ ಮುಂಬೈ ಗಣೇಶ ಪ್ರತಿಷ್ಠಾಪನೆಗೆ ಎಷ್ಟು ಪ್ರಸಿದ್ಧಿ ಪಡೆದಿದೆಯೋ ಅದೇ ರೀತಿ ರಾಜ್ಯದಲ್ಲಿಯೇ ಮಹಾನಗರ ಹುಬ್ಬಳ್ಳಿ ಗಣೇಶ ಮೂರ್ತಿಗಳ ಪ್ರತಿಷ್ಠಾಪಿಸುವುದರಲ್ಲಿ ಖ್ಯಾತಿ ಹೊಂದಿದೆ.

ಇದಕ್ಕೆ ಕಾರಣ ಹುಬ್ಬಳ್ಳಿ ‌ದಾಜೀಬಾನ ಪೇಟೆಯ ಶ್ರೀ ಗಜಾನನ ಉತ್ಸವ ಮಂಡಳಿ ಪ್ರತಿಷ್ಠಾಪಿಸುವ ಹುಬ್ಬಳ್ಳಿ ಕಾ ರಾಜಾ ಗಣಪತಿ. ಇದು ಹುಬ್ಬಳ್ಳಿಯಲ್ಲಿ ದೊಡ್ಡದಾದ ಗಜಮುಖನ ಮೂರ್ತಿಯಾಗಿದೆ. ಜೊತೆಗೆ ಬೇಡಿದವರ ಇಷ್ಟಾರ್ಥಗಳನ್ನು ಈಡೇರಿಸುವ ಸಿದ್ಧಿ ವಿನಾಯಕನಾಗಿ ಪ್ರಸಿದ್ಧಿ ಪಡೆದಿದೆ.

ದಾಜೀಬಾನಪೇಟೆಯ ಗಜಾನನ ಉತ್ಸವ ಸಮಿತಿ ಸತತವಾಗಿ 1975 ರಿಂದಲೂ ಗಣೇಶ ಮೂರ್ತಿ ಪ್ರತಿಷ್ಠಾಪನೆ‌ ಮಾಡುತ್ತ ಬಂದಿದ್ದು, 48 ವರ್ಷಗಳಾಗಿವೆ. ಇನ್ನೆರಡು ವರ್ಷದಲ್ಲಿ ಸುವರ್ಣ ಮಹೋತ್ಸವದ ಆಚರಿಸಿಕೊಳ್ಳಲಿದೆ.

ಮುಂಬೈ ಗಣಪತಿಯಿಂದ ಪ್ರಭಾವಿತನಾದ ಗಣೇಶ..ಹುಬ್ಬಳ್ಳಿ ಕಾ ರಾಜಾ ಗಣಪತಿಯನ್ನು ಮುಂಬೈ ಗಣಪತಿಗಳಿಂದ ಪ್ರೇರಿತಗೊಂಡು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. 2008 ರಲ್ಲಿ ಮುಂಬೈ ಲಾಲಭಾಗ ಕಾ ರಾಜಾ ಗಣಪತಿಯಿಂದ ಪ್ರಭಾವಿತರಾಗಿ ಇದೇ ರೀತಿ ಗಣಪತಿ ಪ್ರತಿಷ್ಠಾಪನೆ ಮಾಡಲು ಮಂಡಳಿ‌ ನಿರ್ಧಾರ ತೆಗೆದುಕೊಂಡು ಪ್ರಾರಂಭಿಸಿದೆ. ಮೊದಲು ದಾಜೀಬಾನಪೇಟೆ ಕಾ ರಾಜಾ‌ ಎಂಬ ದೊಡ್ಡ ಗಣಪತಿ ಪ್ರತಿಷ್ಠಾಪನೆ ಮಾಡಲಾಯಿತು. ಕೊನೆಗೆ ಬರು ಬರುತ್ತಾ ಕಳೆದ 16 ವರ್ಷಗಳಿಂದ ಹುಬ್ಬಳ್ಳಿ ಕಾ ರಾಜಾ ಎಂಬ ಹೆಸರಿನಿಂದ ವರಸಿದ್ಧಿ ವಿನಾಯಕನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವದರ ಜೊತೆಗೆ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಲಾಗುತ್ತಿದೆ. ಪ್ರತಿವರ್ಷ ವಿಭಿನ್ನವಾಗಿ ಜನಜಾಗೃತಿ ಕಾರ್ಯಕ್ರಮಗಳ‌ ಜೊತೆಗೆ ಪ್ರತಿದಿನ ಅನ್ನಸಂತಪರ್ಣೆ ಮಾಡಲಾಗುತ್ತಿದೆ.

ದಾಖಲೆ ಮಟ್ಟದಲ್ಲಿ ಬೆಳ್ಳಿ ಉಡುಗೊರೆ..ಹುಬ್ಬಳ್ಳಿ ಕಾ‌ ರಾಜಾನ ಮತ್ತೊಂದು ವಿಶೇಷವೆಂದ್ರೆ ಇಲ್ಲಿಯವರೆಗೂ 24 ಕೆಜಿ ಬೆಳ್ಳಿ ಉಡುಗೊರೆಯಾಗಿ ಬಂದಿದೆ. ಗಣಪತಿಗೆ ಬೆಳ್ಳಿಯ 4 ಕೆಜಿ ಸೊಂಟದ ಪಟ್ಟಿ, ಹಸ್ತಗಳು, ಪಾದರಕ್ಷೆ, ಸೋಂಡಿಲು ಕವಚ, ದಂತ, ಕಿವಿಯೋಲೆ, ತ್ರಿಶೂಲ, ಸ್ವಸ್ತಿಕ, ಓಂ ಸೇರಿದಂತೆ ಹಲವು ಆಭರಣಗಳು ಉಡುಗೊರೆಯಾಗಿ ಬಂದಿವೆ. ಭಕ್ತರೊಬ್ಬರು ಪ್ರತಿ ವರ್ಷ ಪಾವ್ ಕಿಲೋ ಬೆಳ್ಳಿ ಆಭರಣವನ್ನು ಭಕ್ತಿಯ ಕಾಣಿಕೆಯಾಗಿ ನೀಡುತ್ತಾರೆ. ಕಳೆದ 6 ವರ್ಷಗಳಲ್ಲಿ 21 ಕೆಜಿ ಆಭರಣ ಸಂಗ್ರಹವಾಗಿದೆ.

ಸವಾಲಾಗಿ ಸ್ವೀಕರಿಸಿ ಹುಬ್ಬಳ್ಳಿ ಕಾ ರಾಜಾ ಪ್ರತಿಷ್ಠಾಪನೆ..ಗಣಪತಿ ‌ಮೂರ್ತಿ ಪ್ರತಿಷ್ಠಾಪನೆ ಅಷ್ಟು ಸುಲಭವಾಗಿರಲಿಲ್ಲ ಎಂದು ಗಜಾನನ ಉತ್ಸವ ಸಮಿತಿ ಅಧ್ಯಕ್ಷ ಪಾಂಡುರಂಗ ಮೆಹರವಾಡೆ ಅನುಭವವನ್ನು ಹಂಚಿಕೊಂಡಿದ್ದಾರೆ.‌ ಮುಂಬೈನಲ್ಲಿ 20 ಅಡಿಗಿಂತಲೂ ಹೆಚ್ಚು ದೊಡ್ಡದಾದ ಗಣಪತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಆದ್ರೆ ಇಲ್ಲಿ ಅಷ್ಟು ಸಲುಭವಾಗಿರಲಿಲ್ಲ.‌ ಇದರ ಬಗ್ಗೆ ಮುಂಬೈ ಹಾಗೂ ಪುಣೆಗೆ ಹೋಗಿ, ಅಲ್ಲಿ ನೋಡಿಕೊಂಡು ಬಂದು ಪ್ರಾರಂಭಿಸಲಾಗಿದೆ.‌

ಅಲ್ಲಿ ಸಮುದ್ರದಲ್ಲಿ ಗಣೇಶ ಮೂರ್ತಿ ನಿಮಜ್ಜನ ಮಾಡಲಾಗುತ್ತಿದೆ. ಆದ್ರೆ ಇಲ್ಲಿನ ಬಾವಿಗಳಲ್ಲಿ ವಿಸರ್ಜನೆ ಮಾಡುವುದು ಅಷ್ಟು ಸರಳವಾಗಿರಲಿಲ್ಲ. ಅದರ ಜೊತೆಗೆ ಮೆರಣಿಗೆಗೆ ರಸ್ತೆ ಅಗಲೀಕರಣ ಸಮಸ್ಯೆ ಎದುರಾಗಿತ್ತು.‌ ಇದಕ್ಕಾಗಿ ಪ್ರತ್ಯೇಕವಾದ ವಿಶಿಷ್ಟವಾದ ಟ್ರಾಲಿ ಸಿದ್ಧಪಡಿಸಲಾಗಿದೆ ಎಂದರು.

ವರ್ಷದಿಂದ ವರ್ಷಕ್ಕೆ ಭಕ್ತರನ್ನು ಸೆಳೆಯುತ್ತಿದೆ. ಅದರ ಜೊತೆಗೆ ಇಷ್ಟಾರ್ಥ ಸಿದ್ಧಿ ಗಣಪತಿ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಈ ವರ್ಷ 25 ಅಡಿ ಎತ್ತರದ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ರಾಜ್ಯದ ನಾನಾ ಜಿಲ್ಲೆಗಳ ಭಕ್ತರಲ್ಲದೇ ಅನ್ಯ ರಾಜ್ಯದ ಭಕ್ತರು ಆಗಮಿಸಿ ಗಣಪತಿ ದರ್ಶನ ಪಡೆದುಕೊಂಡು ಹೋಗುತ್ತಿದ್ದಾರೆ.

ಇದನ್ನೂಓದಿ:ತಿಲಕರು ಆರಂಭಿಸಿದ ಬೆಳಗಾವಿ ಗಣೇಶೋತ್ಸವಕ್ಕೆ 119 ವರ್ಷಗಳ ಸಂಭ್ರಮ!

Last Updated : Sep 27, 2023, 5:56 PM IST

ABOUT THE AUTHOR

...view details