ಕರ್ನಾಟಕ

karnataka

ETV Bharat / state

ಹು-ಧಾ ಮಹಾನಗರ ಪಾಲಿಕೆಗೆ ಹರಿದು ಬಂತು ₹ 32 ಕೋಟಿ ಆಸ್ತಿ ತೆರಿಗೆ

ಹು-ಧಾ ಮಹಾನಗರ ಪಾಲಿಕೆ ಆನ್​​ಲೈನ್ ವ್ಯವಸ್ಥೆ ಸದುಪಯೋಗ ಪಡಿಸಿಕೊಂಡು ಲಾಕ್​ಡೌನ್ ಸಂದರ್ಭದಲ್ಲಿ ಉತ್ತಮ ರೀತಿಯಲ್ಲಿ ಆದಾಯ ಸಂಗ್ರಹ ಮಾಡಿದ್ದು, ಅವಳಿನಗರದ ಸ್ವಚ್ಛತೆಗೆ ಮುನ್ನಡೆ ಬರೆಯುವತ್ತ ದಾಪುಗಾಲು ಹಾಕುತ್ತಿದೆ.

hubli-Dharwad Metropolitan city
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ

By

Published : Aug 20, 2020, 7:17 PM IST

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಕೊರೊನಾ ಎಲ್ಲಾ ಕ್ಷೇತ್ರಗಳ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರಿದ್ರೆ ಲಾಕ್​ಡೌನ್​ ಸಂದರ್ಭದಲ್ಲೂ ಈ ಪಾಲಿಕೆ ಉತ್ತಮ ರೀತಿಯಲ್ಲಿ ಆದಾಯ ಸಂಗ್ರಹಿಸಿದೆ.

ಕೊರೊನಾ ಅಟ್ಟಹಾಸದಿಂದ ಎಲ್ಲೆಡೆಯಲ್ಲೂ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಎದೆಷ್ಟೋ ವಾಣಿಜ್ಯ ವಲಯಗಳು ಸಂಕಷ್ಟಕ್ಕೆ ಸಿಲುಕಿದ್ದವು. ಇಂಥಾ ಸಂದಿಗ್ಧ ಪರಿಸ್ಥಿತಿಯಲ್ಲೂ ಆನ್​ಲೈನ್​​​ನಲ್ಲಿ ಸಾರ್ವಜನಿಕರಿಗೆ ಆಸ್ತಿ ತೆರಿಗೆ ಪಾವತಿಸೋಕೆ ಹು-ಧಾ ಮಹಾನಗರ ಪಾಲಿಕೆ ಅವಕಾಶ ಕಲ್ಪಿಸಿತ್ತು. ಇದರಿಂದಾಗಿ ಬಹಳಷ್ಟು ಆದಾಯ ಕೂಡಾ ಹರಿದುಬಂತು.

ಕೊರೊನಾ ವೇಳೆಯಲ್ಲೂ ಕಚೇರಿಗಳಿಗೆ ತೆರಳಲು ಜನ ಭಯ ಪಡುತ್ತಿದ್ದರು. ಈ ವೇಳೆ ತೆರಿಗೆ ಸಂಗ್ರಹ ಕೂಡಾ ಕಷ್ಟದ ವಿಚಾರವಾಗಿತ್ತು. ಆನ್​ಲೈನ್​ನಲ್ಲಿ ತೆರಿಗೆ ಪಾವತಿಸಲು ಅನುಮತಿ ನೀಡಿದ ಪರಿಣಾಮ ಏಪ್ರಿಲ್​​​ನಿಂದ ಜುಲೈ ಅಂತ್ಯದವರೆಗೆ ₹32 ಕೋಟಿ ಸಂಗ್ರವಾಗಿದೆ. ಆಸ್ತಿ ತೆರಿಗೆ ಶೇ.5ರಷ್ಟು ರಿಯಾಯಿತಿ ನೀಡಿದರೂ ಹೆಚ್ಚು ತೆರಿಗೆ ಸಂಗ್ರಹವಾಗುವ ಮೂಲಕ ಅಚ್ಚರಿ ಮೂಡಿಸಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ

ಸಾರ್ವಜನಿಕರು ತೆರಿಗೆ ಪಾವತಿಸಿರುವ ಕಾರಣದಿಂದಾಗಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ಹುಬ್ಬಳ್ಳಿ ಧಾರವಾಡದಲ್ಲಿ ಆಗಲಿವೆ ಅಂತ ಅಲ್ಲಿನ ಆಯುಕ್ತರು ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಆನ್​ಲೈನ್ ಸೇವೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಕೆಲಸವನ್ನು ಪಾಲಿಕೆ ಮಾಡಲಿದ್ದು, ಜನರ ಸಹಕಾರ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details