ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ‌ ಸ್ವಾಮೀಜಿ ರೈಲು ನಿಲ್ದಾಣ ಹೆಸರು ಈಗ ಅಧಿಕೃತ..

ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ್ ಅಂಗಡಿ ಮಠದ ಭಕ್ತರು ಆಗಿದ್ದರು. ಅವರು ಸಚಿವರಾದ ಮೇಲೆ ಇದಕ್ಕೆ ಹೆಚ್ಚಿನ ಒತ್ತಾಯ ಕೇಳಿ ಬಂದಿತ್ತು. ಅದಕ್ಕೆ ತಕ್ಕಂತೆ ಸುರೇಶ ಅಂಗಡಿ ಇದಕ್ಕಾಗಿ ಸಾಕಷ್ಟು ಪ್ರಯತ್ನ ಪಟ್ಟಿದ್ದರು..

hubballi-railway-station-name-chnaged-as-siddhartha-swamiji-railway-station
ಹುಬ್ಬಳ್ಳಿ ರೈಲು ನಿಲ್ದಾಣ ಇನ್ನು ಮುಂದೆ 'ಶ್ರೀ ಸಿದ್ಧಾರೂಢ‌ ಸ್ವಾಮೀಜಿ ರೈಲು ನಿಲ್ದಾಣ'

By

Published : Nov 20, 2020, 1:38 PM IST

ಹುಬ್ಬಳ್ಳಿ: ಈ ಭಾಗದ ಜನರ ಬಹು ದಿನಗಳ ಕನಸು ನನಸಾಗಿದೆ. ಹುಬ್ಬಳ್ಳಿ ರೈಲ್ವೆ ಜಂಕ್ಷನ್‌ ಇನ್ನು ಮುಂದೆ 'ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ' ಎಂದಾಗಲಿದೆ.

ಈ ದಿಸೆಯಲ್ಲಿ ರಾಜ್ಯ ಸರ್ಕಾರ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಿದೆ. ಇದು ಹುಬ್ಬಳ್ಳಿಯ ಆರಾಧ್ಯದೈವ ಶ್ರೀ ಸಿದ್ಧಾರೂಢರ ಭಕ್ತರಿಗೆ ಸಂತಸ ತಂದಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯ ಸರ್ಕಾರ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಿದೆ. ಗೆಜೆಟ್‌ಗೆ ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿದೆ.

ರಾಜ್ಯ ಸರ್ಕಾರ ಪದಬರಿಗೆ (ಸ್ಪೆಲ್ಲಿಂಗ್‌) ಗೆಜೆಟ್‌ ಹೊರಡಿಸಿದ್ದಕ್ಕೆ ಹಾಗೂ ಕೇಂದ್ರ ಸರ್ಕಾರ ಅದಕ್ಕೆ ಒಪ್ಪಿಗೆ ಸೂಚಿಸಿದ್ದಾಗಿ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೊಯಲ್ ಸ್ಪಷ್ಟಪಡಿಸಿದ್ದರು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಇಬ್ಬರು ಟ್ವೀಟ್‌ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಆರೂಢ ಭಕ್ತರ ದಶಕದ ಕನಸು ನನಸಾದಂತಾಗಿದೆ.

ರಾಜ್ಯ ಸರ್ಕಾರ ಗೆಜೆಟ್‌ ನೋಟಿಫಿಕೇಶನ್
ದಶಕದ ಹೋರಾಟಕ್ಕೆ ಜಯ

ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ಆರೂಢರ ಹೆಸರಿಡಬೇಕೆನ್ನುವುದು ದಶಕದ ಹೋರಾಟವಾಗಿತ್ತು. 2010 ರಿಂದಲೇ ಭಕ್ತರು, ಜನಪ್ರತಿನಿಧಿಗಳು, ಮಠದ ಟ್ರಸ್ಟ್‌ ಕಮಿಟಿ ಎಲ್ಲರೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದರು. ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ, ಕೆ.ಹೆಚ್‌. ಮುನಿಯಪ್ಪ, ಸುರೇಶ ಪ್ರಭು, ಈಗಿನ ಪಿಯೂಷ ಗೋಯಲ್‌ ಎಲ್ಲರಿಗೂ ಮನವಿ ಸಲ್ಲಿಸಲಾಗಿತ್ತು.

ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ್ ಅಂಗಡಿ ಮಠದ ಭಕ್ತರು ಆಗಿದ್ದರು. ಅವರು ಸಚಿವರಾದ ಮೇಲೆ ಇದಕ್ಕೆ ಹೆಚ್ಚಿನ ಒತ್ತಾಯ ಕೇಳಿ ಬಂದಿತ್ತು. ಅದಕ್ಕೆ ತಕ್ಕಂತೆ ಸುರೇಶ ಅಂಗಡಿ ಇದಕ್ಕಾಗಿ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಅದರಿಂದಾಗಿ 2020 ರ ಸೆ. 9 ರಂದು ಕೇಂದ್ರ ಸರ್ಕಾರ ರೈಲ್ವೆ ನಿಲ್ದಾಣಕ್ಕೆ ಆರೂಢರ ಹೆಸರಿಡಲು ಒಪ್ಪಿಗೆ ಸೂಚಿಸಿ ನೋಟಿಫಿಕೇಶನ್​​‌ ಹೊರಡಿಸಲು ಸೂಚನೆ ನೀಡಿತ್ತು.

For All Latest Updates

TAGGED:

ABOUT THE AUTHOR

...view details