ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಐಎಲ್​ಎಸ್​​​ ಕಾರ್ಯಾರಂಭ: ಹವಾಮಾನ ವೈಪರೀತ್ಯಕ್ಕೆ ಗುಡ್‌ ಬೈ - ಇನ್‌ಸ್ಟ್ರುಮೆಂಟಲ್ ಲ್ಯಾಂಡಿಂಗ್ ಸಿಸ್ಟಂ

ಇತ್ತೀಚೆಗೆ ಮೂರ್ನಾಲ್ಕು ಬಾರಿ ಹವಾಮಾನ ವೈಪರೀತ್ಯದಿಂದ ನಗರದ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಗಿದ್ದ ವಿಮಾನ ಮಂಗಳೂರು, ಬೆಂಗಳೂರು ಸೇರಿದಂತೆ ಬೇರೆ ಬೇರೆ ವಿಮಾನ ನಿಲ್ದಾಣಕ್ಕೆ ತೆರಳಿ ನಾಲ್ಕಾರು ಗಂಟೆಗಳ ಬಳಿಕ ವಾಪಸ್ ಇಲ್ಲಿಗೆ ಬಂದು ಲ್ಯಾಂಡ್​ ಆಗಿತ್ತು.

hubballi-airport-gets-instrument-landing-system
ಹುಬ್ಬಳ್ಳಿ ವಿಮಾನ ನಿಲ್ದಾಣ

By

Published : Aug 13, 2021, 8:21 PM IST

Updated : Aug 13, 2021, 8:29 PM IST

ಹುಬ್ಬಳ್ಳಿ:ನಗರದ ವಿಮಾನ ನಿಲ್ದಾಣದಲ್ಲಿ ಇನ್‌ಸ್ಟ್ರುಮೆಂಟಲ್ ಲ್ಯಾಂಡಿಂಗ್ ಸಿಸ್ಟಂ (ಐಎಲ್‌ಎಸ್) ಕಾರ್ಯಾರಂಭ ಮಾಡಿದ್ದು, ಇನ್ನು ಮುಂದೆ ಎಂತಹ ಹವಾಮಾನ ವೈಪರೀತ್ಯ ಸಂದರ್ಭದಲ್ಲಿಯೂ ಸುರಕ್ಷಿತವಾಗಿ ವಿಮಾನಗಳು ಲ್ಯಾಂಡ್​ ಆಗಬಹುದಾಗಿದೆ.

ಇನ್‌ಸ್ಟ್ರುಮೆಂಟಲ್ ಲ್ಯಾಂಡಿಂಗ್ ಸಿಸ್ಟಂ ( ಐಎಲ್‌ಎಸ್ ) ಕಾರ್ಯಾರಂಭ

ಇತ್ತೀಚೆಗೆ ಮೂರ್ನಾಲ್ಕು ಬಾರಿ ಹವಾಮಾನ ವೈಪರೀತ್ಯದಿಂದ ನಗರದ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಗಿದ್ದ ವಿಮಾನ ಮಂಗಳೂರು, ಬೆಂಗಳೂರು ಸೇರಿದಂತೆ ಬೇರೆ ಬೇರೆ ವಿಮಾನ ನಿಲ್ದಾಣಕ್ಕೆ ತೆರಳಿ ನಾಲ್ಕಾರು ಗಂಟೆಗಳ ಬಳಿಕ ವಾಪಸ್ ಇಲ್ಲಿಗೆ ಬಂದು ಲ್ಯಾಂಡ್​ ಆಗಿತ್ತು.

ಇನ್ನು, ಕೆಲ ವಿಮಾನಗಳು ಆಗಸದಲ್ಲೇ ಗಂಟೆಗಳ ಕಾಲ ಸುತ್ತು ಹೊಡೆದು ಬಳಿಕ ಸುರಕ್ಷಿತವಾಗಿ ಇಳಿಸಲಾಗಿತ್ತು. ಆದರೆ, ಇನ್ನುಮುಂದೆ ಇಂತಹ ಯಾವುದೇ ಸಮಸ್ಯೆಗಳು ಕೂಡ ಎದುರಾಗಲಾರದು. ಈಗಾಗಲೇ ಐಎಲ್‌ಎಸ್ ವ್ಯವಸ್ಥೆ ಕಾಮಗಾರಿ ಪೂರ್ಣಗೊಂಡಿದ್ದು, ಇಂದು ಸಾಂಕೇತಿಕವಾಗಿ ‌ಚಾಲನೆ ನೀಡಲಾಗಿದೆ.

ಐಎಲ್‌ಎಸ್ ಕಾರ್ಯಾರಂಭಕ್ಕೆ ಚಾಲನೆ

2020ರ ಜನವರಿಯಿಂದಲೇ ರೆಡ್ ಟವರ್‌ ಅಳವಡಿಕೆ ಕಾಮಗಾರಿ ನಡೆದಿತ್ತು. ನವೆಂಬರ್‌ನಲ್ಲಿಯೇ ಇದರ ಕಾರ್ಯ ಬಹುತೇಕ ಪೂರ್ಣಗೊಂಡಿತ್ತು. ಆದರೆ, ಕೊರೊನಾ ಸೇರಿ ಇತರ ಕಾರಣದಿಂದ ಪರಿಶೀಲನಾ ಕಾರ್ಯ ಈ ವರ್ಷ ನಡೆಸಲು ನಿಶ್ಚಯಿಸಲಾಯಿತು. ಹೀಗಾಗಿ, ವಿಳಂಬವಾಗಿದೆ. ಈಗಾಗಲೇ ಮೂರು ಹಂತದ ಪ್ರಾಯೋಗಿಕತೆ ಪೂರ್ಣಗೊಂಡಿದ್ದು, ಇಂದಿನಿಂದ ಐಎಲ್ಎಸ್ ಲ್ಯಾಂಡಿಂಗ್ ಕಾರ್ಯನಿರ್ವಹಿಸಲಿದೆ‌.

ಐಎಲ್​ಎಸ್​​​ ಕಾರ್ಯಾರಂಭ
Last Updated : Aug 13, 2021, 8:29 PM IST

ABOUT THE AUTHOR

...view details