ಹುಬ್ಬಳ್ಳಿ :ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿ ಸದಸ್ಯರು ಪಿಡಿಒಗಳ ಕೈಗೊಂಬೆ ಆಗಬಾರದು. ಅವರು ಹೇಳಿದ ಕಡೆಯೆಲ್ಲಾ ಹೆಬ್ಬೆಟ್ಟು, ಸಹಿ ಹಾಕಬಾರದು. ಅಭಿವೃದ್ಧಿ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೇ ಪಿಡಿಒಗಳ ಕೊರಳ ಪಟ್ಟಿ ಹಿಡಿದು ಕೆಲಸ ಮಾಡಿಸಬೇಕೆಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಪಿಡಿಒಗಳ ಕೊರಳಪಟ್ಟಿ ಹಿಡಿದು ಕೆಲಸ ಮಾಡಿಸಿಕೊಳ್ಳಿ: ಸಚಿವ ವಿ.ಸೋಮಣ್ಣ - Get a job with a collar of PDO
ನೂತನವಾಗಿ ಆಯ್ಕೆ ಆಗಿರುವ ಗ್ರಾಮ ಪಂಚಾಯಿತಿ ಸದಸ್ಯರು, ಪಿಡಿಒಗಳನ್ನ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳುವ ಜೊತೆಗೆ ಪಿಡಿಒಗಳ ಕೊರಳಪಟ್ಟಿ ಹಿಡಿದು ಕೆಲಸ ಮಾಡಿಸಿಕೊಳ್ಳಬೇಕೆಂದು ಸಚಿವ ವಿ.ಸೋಮಣ್ಣ ತಾಕೀತು ಮಾಡಿದರು.
ಗ್ರಾಮಗಳಿಗೆ ಬರುವ ಕೋಟಿ ರೂಪಾಯಿ ಹಣವನ್ನು ಸರಿಯಾದ ರೀತಿಯಲ್ಲಿ ವಿನಿಯೋಗ ಮಾಡಬೇಕು. ವಸತಿ ಯೋಜನೆಯಲ್ಲಿ ಬರುವ ಮನೆಗಳನ್ನು ಹಣಕ್ಕಾಗಿ ಮಾರಿಕೊಳ್ಳಬಾರದು. ಸರ್ಕಾರದ ಯೋಜನೆಗಳನ್ನ ಸರಿಯಾಗಿ ಫಲಾನುಭವಗಳಿಗೆ ಹಂಚಿ ಕೆಲಸ ಮಾಡಿದ್ರೆ ಮುಂದೆ ಮೀಸಲಾತಿ ಬದಲಾದರೂ, ಅದೇ ಜನರು ನಿಮ್ಮನ್ನ ಬೇರೆ ವಾರ್ಡ್ನಿಂದ ನಿಲ್ಲಿಸಿ ಗೆಲ್ಲಿಸುವಂತೆ ಕೆಲಸ ಮಾಡಬೇಕೆಂದು ಕಿವಿಮಾತು ಹೇಳಿದ್ರು.