ಕರ್ನಾಟಕ

karnataka

ETV Bharat / state

ಮಷಿನ್‌ನಲ್ಲಿ ಕರಗಿಸಿ ಇಟ್ಟಿದ್ದ 61.8 ಲಕ್ಷ ಮೌಲ್ಯದ ಆಭರಣಗಳ ಲಿಕ್ವಿಡ್‌ ಕಳುವು ಪ್ರಕರಣ: ನಾಲ್ವರ ಬಂಧನ... - ಆಟೊ ಕಳ್ಳತನ

ಕರಿಗಿಸಿ ಇಟ್ಟಿದ್ದ ಬಂಗಾರ ಕಳವು ಮಾಡಿದ್ದ ಮಹಾರಾಷ್ಟ್ರದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ
ಬಂಧಿತ ಆರೋಪಿ

By ETV Bharat Karnataka Team

Published : Sep 8, 2023, 4:13 PM IST

ಹುಬ್ಬಳ್ಳಿ:ಬಂಗಾರದ ಅಂಗಡಿಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳರ ಗ್ಯಾಂಗ್ ಬಂಧಿಸುವಲ್ಲಿ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಮರಾಠಾಗಲ್ಲಿಯಲ್ಲಿರುವ ಬಂಗಾರ ತಯಾರಿಕೆ ಅಂಗಡಿಯ ಶಟರ್ಸ್ ಮುರಿದು ಬಂಗಾರದ ಲಿಕ್ವಿಡ್ ಕಳ್ಳತನ ಮಾಡಿ ಪರಾರಿ ಆಗಿದ್ದ ಮಹಾರಾಷ್ಟ್ರ ಮೂಲದ ಅಜಯ ಕದಂ, ಆದಿನಾಥ ಬೋಸ್ಲೆ, ಅಜಯ ಬೋಸ್ಲೆ, ಅಲ್ಫಾಕ್ ಅಲಿಯಾಸ್ ಸಿದ್ಧಾರ್ಥ ಕಾಂಬಳೆ ಬಂಧಿತರು. ಇನೊಬ್ಬ ಕಳ್ಳ ಪರಾರಿಯಾಗಿದ್ದಾನೆ.

ಮಷಿನ್‌ನಲ್ಲಿ ಕರಗಿಸಿ ಇಟ್ಟಿದ್ದ 61.8 ಲಕ್ಷ ರೂ ಮೌಲ್ಯದ ಬಂಗಾರದ ಆಭರಣಗಳ ಲಿಕ್ವಿಡ್‌ ಅನ್ನು ಕಳುವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ಎ.ಎಮ್. ತಹಶೀಲ್ದಾರ್​ ಅವರ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿ ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ನಾಲ್ವರು ಆರೋಪಿಗಳನ್ನು ಬಂಧಿಸಿ ಅವರಿಂದ 6.5 ಲಕ್ಷ ರೂ ನಗದು ಹಾಗೂ 12 ಲಕ್ಷ ರೂ ಮೌಲ್ಯದ ಗಟ್ಟಿ ಬಂಗಾರ ಸೇರಿದಂತೆ ಒಟ್ಟು 18.5 ಲಕ್ಷ ರೂ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ. ಇನ್ನೊಬ್ಬ ಆರೋಪಿ ಎಸ್ಕೇಪ ಆಗಿದ್ದು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.

ಆಕ್ಸಿಡೆಂಟ್ ಆಗಿದ್ದ ಆಟೋ ಕಳ್ಳತನ:ಬೆಂಗಳೂರಿನಲ್ಲಿ ಬಾಡಿಗೆ ಮುಗಿಸಿ ಮನೆಗೆ ಹೋಗುವಾಗ ನಿಯಂತ್ರಣ ತಪ್ಪಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಚಿಕಿತ್ಸೆ ಪಡೆದು ಬರುವಷ್ಟರಲ್ಲೇ ಖದೀಮರು ಆಟೊ ಕಳ್ಳತನ ಮಾಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ವರ್ತೂರಿನ ಕಾವೇರಿನಗರದಲ್ಲಿ ವಾಸವಾಗಿದ್ದ ನಿತಿನ್ ಎಂಬುವರ ಆಟೊ ಕಳ್ಳತನವಾಗಿದ್ದು ಈ ಸಂಬಂಧ ಅಪರಿಚಿತ ಕಳ್ಳರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಹಲವು ವರ್ಷಗಳಿಂದ ಆಟೊ ಓಡಿಸಿ ಜೀವನ ನಡೆಸುತ್ತಿದ್ದ ನಿತಿನ್ ಎರಡು ತಿಂಗಳ ಹಿಂದೆ ಫೈನಾನ್ಸ್ ಮೇಲೆ 3.35 ಲಕ್ಷ ನೀಡಿ ಆಟೊ ಖರೀದಿಸಿದ್ದರು. ಪ್ರತಿ ತಿಂಗಳ 10 ಸಾವಿರ ಇಎಂಐ ಪಾವತಿಸುತ್ತಿದ್ದರು. ಸೆಪ್ಟೆಂಬರ್ 3ರ ರಾತ್ರಿ ಅಟೊ ಬಾಡಿಗೆ ಮುಗಿಸಿಕೊಂಡು ಮನೆಗೆ ತೆರಳವಾಗ ಚಾಲುಕ್ಯ ಸರ್ಕಲ್‌ ಕಡೆಯಿಂದ ಹೈಗ್ರೌಂಡ್ಸ್ ಜಂಕ್ಷನ್‌ ಕಡೆಗೆ ವೇಗವಾಗಿ ಹೋಗುವಾಗ ನಿಯಂತ್ರಣ ತಪ್ಪಿ ಆಟೊ ಪಲ್ಟಿ ಹೊಡೆದಿದೆ‌‌. ಗಾಯಗೊಂಡಿದ್ದ ನಿತಿನ್​ಗೆ ಸಾರ್ವಜನಿಕರು ಉಪಚರಿಸಿ ಮತ್ತೊಂದು ವಾಹನದಲ್ಲಿ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಿದ್ದರು‌.

ಚಿಕಿತ್ಸೆ ಪಡೆದು ಎರಡು ಗಂಟೆ ಬಳಿಕ ಅಪಘಾತವಾದ ಸ್ಥಳಕ್ಕೆ ಬಂದು ನೋಡಿದಾಗ ಅಟೊ ನಾಪತ್ತೆಯಾಗಿತ್ತು. ಸುತ್ತಮುತ್ತಲು ಆಟೊಗಾಗಿ ಶೋಧಿಸಿದ್ದಾರೆ. ನಂತರ ಟ್ರಾಫಿಕ್ ಪೊಲೀಸರಲ್ಲಿ ವಿಚಾರಿಸಿದಾಗ ಆಟೊ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಅಂತಿಮವಾಗಿ ಆಟೋ ಕಳ್ಳತನವಾಗಿದೆ ಎಂದು ಭಾವಿಸಿ ಹೈಗ್ರೌಂಡ್ಸ್ ಪೊಲೀಸರಿಗೆ ದೂರು‌ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತವಾದ ಸ್ಥಳದ ಸುತ್ತಮುತ್ತ ಸಿಸಿಟಿವಿ ಕ್ಯಾಮರ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:15% ಕಮಿಷನ್ ಹೆಸರಿನಲ್ಲಿ 2.20 ಕೋಟಿ ರೂಪಾಯಿ ವಂಚನೆ: ಇಬ್ಬರ ಬಂಧನ

ABOUT THE AUTHOR

...view details