ಧಾರವಾಡ:ಜಿ.ಪಂ.ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧ ಅನಾಮಧೇಯ ಪತ್ರದಲ್ಲಿ ತಮ್ಮ ಹೆಸರಿದ್ದರೂ ತನಿಖೆಯಿಂದ ಕೈಬಿಟ್ಟರೆಂಬ ವಿಚಾರ ಸಂಬಂಧ ಮಾತನಾಡುತ್ತಾ, ಆ ಬಗ್ಗೆ ನನಗೆ ಗೊತ್ತಿಲ್ಲ. ವಿನಯ್ ಪರ ವಕೀಲರು ಏನು ಹೇಳಿದ್ದಾರೋ ಗೊತ್ತಿಲ್ಲ. ನಾನು ನಿಮ್ಮ ಮಾತಿನ ಮೇಲೆ ಪ್ರತಿಕ್ರಿಯೆ ನೀಡಲಾರೆ ಎಂದರು.
ಯೋಗೇಶ್ ಗೌಡ ಕೊಲೆ ಕೇಸ್: ಅನಾಮಧೇಯ ಪತ್ರದ ಬಗ್ಗೆ ನನಗೆ ಗೊತ್ತಿಲ್ಲ-ಹೆಚ್.ಕೆ.ಪಾಟೀಲ್ - Former minister H.K. Patil
ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಅನಾಮಧೇಯ ಪತ್ರದಲ್ಲಿ ತಮ್ಮ ಹೆಸರಿದ್ದರೂ ತನಿಖೆಯಿಂದ ಕೈಬಿಟ್ಟರೆಂಬ ವಿಚಾರಕ್ಕೆ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಹೆಚ್.ಕೆ. ಪಾಟೀಲ್
ಓದಿ: ಯೋಗೇಶ್ ಗೌಡ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಮುತ್ತಗಿ ಹೇಳಿದ್ದೇನು?
ಸಾರಿಗೆ ಸಿಬ್ಬಂದಿ ಮುಷ್ಕರ ವಿಚಾರದ ಬಗ್ಗೆ ಮಾತನಾಡುತ್ತಾ, ಸರ್ಕಾರ ಯಾರ ಜೊತೆ ಹಠ ಸಾಧಿಸಲು ಹೊರಟಿದೆ. ಸರ್ಕಾರ ಇದೆಯೋ, ಇಲ್ಲವೋ?ಎಂದು ಜನ ಕೇಳುತ್ತಿದ್ದಾರೆ. ದಯಮಾಡಿ ಸಿಎಂ, ಸಾರಿಗೆ ಸಚಿವರು ತಕ್ಷಣ ಸಮಸ್ಯೆ ಬಗೆಹರಿಸಬೇಕು. ಇಷ್ಟು ದಿನ ಬಸ್ ನಿಂತರೆ ಏನಾಗುತ್ತೆ ಅನ್ನೋ ಕಲ್ಪನೆ ಇಲ್ಲವೇ ಇವರಿಗೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.