ಹುಬ್ಬಳ್ಳಿ:ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿರುವುದು ಹಾಗೂ ನಗರದ ವಿವಿಧೆಡೆ ಜನರ ಮೇಲೆ ಬೀದಿನಾಯಿಗಳು ದಾಳಿ ಮಾಡಿರುವ ಈ ಕುರಿತಂತೆ ಈಟಿವಿ ಭಾರತ ಶುಕ್ರವಾರ ವಿಡಿಯೋ ಸಹಿತ ಸುದ್ದಿ ಪ್ರಕಟಿಸಿ ಬೆಳಕು ಚೆಲ್ಲಿತ್ತು. 'ಬೀದಿನಾಯಿ ಹಾವಳಿಗೆ ವಾಣಿಜ್ಯನಗರಿ ಹುಬ್ಬಳ್ಳಿ ಜನ ತತ್ತರ' ಎಂಬ ಈಟಿವಿ ಭಾರತ ವರದಿ ನಗರದಾದ್ಯಂತ ವೈರಲ್ ಆಗುತ್ತಿದ್ದಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡು ಇಂದಿನಿಂದ ಶ್ವಾನಗಳನ್ನು ಹಿಡಿಯುವ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.
ಬೀದಿನಾಯಿ ಹಿಡಿಯುವ ಕಾರ್ಯಾಚರಣೆಗೆ ಇಳಿದ ಹುಧಾ ಪಾಲಿಕೆ ಸಿಬ್ಬಂದಿ ಕೇಶ್ವಾಪುರ, ಹಳೆ ಹುಬ್ಬಳ್ಳಿ ಮತ್ತಿತರ ಕಡೆ ಕಾರ್ಯಾಚರಣೆ ಕೈಗೊಂಡ ಮಹಾನಗರ ಪಾಲಿಕೆ ಸಿಬ್ಬಂದಿ ಬೀದಿನಾಯಿಗಳನ್ನು ಹಿಡಿದು ಸಂತಾನ ಹರಣ ಚಿಕಿತ್ಸೆ ಮಾಡಿ ನಗರದ ಹೊರ ವಲಯಕ್ಕೆ ತೆಗೆದುಕೊಂಡು ಹೋಗಿದ್ದಾರೆ.
ಕೊಪ್ಪಿಕರ್ ರಸ್ತೆಯಲ್ಲಿ ಜನರ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ್ದ ನಾಯಿಗಳು, ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ್ದವು. ನಾಯಿಗಳ ದಾಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿ, ಇದು ಭಾರಿ ಟೀಕೆಗೊಳಗಾಗಿತ್ತು. ಇದರಿಂದ ಎಚ್ಚೆತ್ತ ಮಹಾನಗರ ಪಾಲಿಕೆ ಕೊನೆಗೂ ಬೀದಿ ನಾಯಿಗಳ ನಿಯಂತ್ರಣಕ್ಕೆ ಪಣತೊಟ್ಟಿದ್ದು, ವಾಣಿಜ್ಯನಗರಿ ಹುಬ್ಬಳ್ಳಿ ಜನರು ನಿಟ್ಟುಸಿರು ಬಿಡುವಂತಾಗಿದೆ.
ಅಧಿಕಾರಿಗಳಿಗೆ ಧನ್ಯವಾದ..ಈಟಿವಿ ಭಾರತ ವರದಿಗೆ ಸ್ಪಂದಿಸಿ ಬೀದಿನಾಯಿಗಳನ್ನು ಹಿಡಿಯುವ ಕಾರ್ಯಾಚರಣೆಗೆ ಇಳಿದಿರುವ ಮಹಾನಗರ ಪಾಲಿಕೆಯ ಸಿಬ್ಬಂದಿಗೆ ಧನ್ಯವಾದ ತಿಳಿಸುತ್ತೇವೆ. ನಗರದ ಜನರ ನೆಮ್ಮದಿಗಾಗಿ ಈ ಕ್ರಮ ಅಗತ್ಯವಿರುವ ಈ ರೀತಿಯ ಇನ್ನಷ್ಟು ಕಾರ್ಯಗಳನ್ನು ಮಹಾನಗರ ಪಾಲಿಕೆ ಮಾಡಲಿ ಎಂದು ಆಶಿಸುತ್ತೇವೆ.
ಇದನ್ನೂ ಓದಿ:ಬೀದಿ ನಾಯಿ ಹಾವಳಿಗೆ ವಾಣಿಜ್ಯ ನಗರಿ ಹುಬ್ಬಳ್ಳಿ ಜನ ತತ್ತರ