ಹುಬ್ಬಳ್ಳಿ:ಕೆಬಿಆರ್ ಡ್ರಾಮಾ ಕಂಪನಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯ ವೃತ್ತಿ ರಂಗಭೂಮಿ ಮಾಲೀಕರ ಸಂಘ(ರಿ), ವಿಜಯಪುರ 2019-20ನೇ ಸಾಲಿನ ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳನ್ನು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಉದ್ಘಾಟಿಸಿದರು.
ನಾಟಕ ಕಂಪನಿಗಳು ಹಾಗೂ ಕಲಾವಿದರ ಸ್ಥಿತಿ ಶೋಚನೀಯ.. ಬಸವರಾಜ್ ಹೊರಟ್ಟಿ!
ಇಂದಿನ ದಿನಮಾನಗಳಲ್ಲಿ ರಂಗಭೂಮಿ ನಾಟಕಕಾರರು ಹಾಗೂ ನಾಟಕ ಕಂಪನಿ ಮಾಲೀಕರ ಆರ್ಥಿಕ ಸ್ಥಿತಿ ಶೋಚನೀಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದರು.
ಬಸವರಾಜ್ ಹೊರಟ್ಟಿ
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಧುನಿಕ ಜಗತ್ತಿನಲ್ಲಿ ಸಿನಿಮಾ, ಟಿವಿ, ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಹಾವಳಿಯಿಂದಾಗಿ ರಂಗಭೂಮಿ ಮತ್ತು ನಾಟಕ ಕಂಪನಿಗಳು ಅಳಿವಿನಂಚಿಗೆ ಬಂದು ತಲುಪಿದೆ ಎಂದರು.
ಶ್ರೇಷ್ಠವಾದ ನಟನೆ ನಾಟಕದಲ್ಲಿದ್ದು ಸಾಮಾಜಿಕ ಅಂಶಗಳನ್ನು ನಾಟಕಗಳು ಹೊಂದಿವೆ. ಅದೇ ರೀತಿ ಸಂಘಟನೆ ಎಂಬ ಶಕ್ತಿಯಿಂದ ಎಲ್ಲರೂ ಶಕ್ತರಾಗಲು ಸಾಧ್ಯ. ಪ್ರತಿಯೊಬ್ಬರು ಸಂಘಟನೆ ಮೂಲಕ ಮುನ್ನಡೆದಲ್ಲಿ ಯಶಸ್ಸು ಸಾಧ್ಯ ಎಂದರು.