ಕರ್ನಾಟಕ

karnataka

ETV Bharat / state

ಶಾಲೆ - ಕಾಲೇಜುಗಳ ಗೇಟಿನ ಹೊರಗೆ ಹಿಜಾಬ್​​ ತೆಗಿಸಬೇಡಿ, ತರಗತಿ ಪ್ರವೇಶಕ್ಕೆ ಮುನ್ನ​​ ತೆಗೆಯಬಹುದು: ಡಿಸಿ ಸೂಚನೆ - Don't remove the hijab outside the school-gate

ಶಾಲೆ - ಕಾಲೇಜುಗಳಲ್ಲಿ ಗೇಟಿನ ಹೊರಗೆ ವಿದ್ಯಾರ್ಥಿನಿಯರನ್ನು ತಡೆದು ಹಿಜಾಬ್​ ತೆಗಿಸಬೇಡಿ, ಆವರಣ ಪ್ರವೇಶಿಸಿದ ಬಳಿಕ ತರಗತಿಗಳಿಗೆ ತೆರಳುವ ಮುನ್ನ ಹಿಜಾಬ್ ತೆಗೆದು ತರಗತಿಗಳನ್ನು ಪ್ರವೇಶಿಸಲು ಅವಕಾಶ ನೀಡಿ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಹೇಳಿದ್ದಾರೆ.

Dharwad District Collector Nitesh K Patil Notice
ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ

By

Published : Feb 17, 2022, 10:21 PM IST

Updated : Feb 17, 2022, 10:50 PM IST

ಧಾರವಾಡ:ಸಮವಸ್ತ್ರ ಸಂಹಿತೆ ಕಡ್ಡಾಯಗೊಳಿಸಿರುವ ಶಾಲೆ, ಕಾಲೇಜುಗಳಲ್ಲಿ ಗೇಟಿನ ಹೊರಗೆ ವಿದ್ಯಾರ್ಥಿನಿಯರನ್ನು ತಡೆದು ಹಿಜಾಬ್ ತೆಗೆಸಬಾರದು. ಆದರೆ, ಆವರಣ ಪ್ರವೇಶಿಸಿದ ಬಳಿಕ ತರಗತಿಗಳಿಗೆ ತೆರಳುವ ಮುನ್ನ ಹಿಜಾಬ್ ತೆಗೆದು ತರಗತಿಗಳನ್ನು ಪ್ರವೇಶಿಸಲು ಅವಕಾಶ ನೀಡಿ.

ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳ ಮುಖ್ಯೋಪಾಧ್ಯಾಯರು, ಪ್ರಾಚಾರ್ಯರು ಈ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಿ, ವಿದ್ಯಾರ್ಥಿಗಳ ಪಾಠ, ಪ್ರವಚನಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:ರಾಜ್ಯಾದ್ಯಂತ ಹಿಂದೂ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ: ರಕ್ಷಣೆಗೆ ಅಖಿಲ ಭಾರತ ಹಿಂದೂ ಮಹಾಸಭಾ ಸರ್ಕಾರಕ್ಕೆ ಒತ್ತಾಯ..

ಈ ಕುರಿತು ಪ್ರಕಟಣೆ ನೀಡಿರುವ ಅವರು, ಶಾಲೆ ಕಾಲೇಜುಗಳ ಆವರಣಕ್ಕೆ ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಹಾಗೂ ಸಿಬ್ಬಂದಿ ಹೊರತುಪಡಿಸಿ ಇತರ ವ್ಯಕ್ತಿಗಳಿಗೆ ಪ್ರವೇಶ ನೀಡಬಾರದು. ಪಾಲಕರು ಊಟ,ಉಪಹಾರ ತಂದು ಕೊಡಲು ಬಂದರೆ ಗೇಟಿನ ಬಳಿಯೇ ಸ್ವೀಕರಿಸುವ ವ್ಯವಸ್ಥೆ ಮಾಡಬೇಕು ಎಂದಿದ್ದಾರೆ.

ಯಾವುದೇ ಕಾರಣಕ್ಕೂ ಅನ್ಯವ್ಯಕ್ತಿಗಳಿಗೆ ಶಾಲೆ, ಕಾಲೇಜು ಆವರಣಕ್ಕೆ ಪ್ರವೇಶಿಸಲು ಅವಕಾಶ ನೀಡಬಾರದು. ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆ-ಕಾಲೇಜುಗಳ ಮುಖ್ಯೋಪಾಧ್ಯಾಯರು, ಪ್ರಾಚಾರ್ಯರು ಈ ನಿರ್ದೇಶನವನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

Last Updated : Feb 17, 2022, 10:50 PM IST

For All Latest Updates

TAGGED:

ABOUT THE AUTHOR

...view details