ಹುಬ್ಬಳ್ಳಿ:ಬಿಜೆಪಿಯ ಅತೃಪ್ತರು ನಮ್ಮ ಜೊತೆಗಿದ್ದಾರೆ. ಹಳ್ಳಿ-ಹಳ್ಳಿಗಳಲ್ಲಿ ನಮ್ಮ ಜೊತೆ ಕ್ಯಾಂಪೇನ್ ಮಾಡುತ್ತಿದ್ದಾರೆಂದು ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿದ್ದಾರೆ.
ಬಿಜೆಪಿ ಅತೃಪ್ತರು ನಮ್ಮ ಸಂಪರ್ಕದಲ್ಲಿ: ವಿನಯ್ ಕುಲಕರ್ಣಿ - ಬಿಜೆಪಿ
ಬಿಜೆಪಿ ಅತೃಪ್ತರು ನಮ್ಮೊಂದಿಗೆ ಸಂಪರ್ಕದಲ್ಲಿದ್ದು, ಈಗಾಗಲೇ ಉಪಚುನಾವಣೆಯಲ್ಲಿ ಅವರು ನಮ್ಮ ಜತೆ ಕ್ಯಾಂಪೇನ್ ಸಹ ನಡೆಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂದಗೋಳ ವಿಧಾನಸಭೆ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಬಿಜೆಪಿ ಕೆಲ ಅತೃಪ್ತರು ಬೆಂಬಲ ಸೂಚಿಸುತ್ತಿದ್ದಾರೆ. ಇನ್ನೂ ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬರುವವರನ್ನು ನಾವು ಸ್ವಾಗತಿಸುತ್ತೇವೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ವೀರಶೈವ ಲಿಂಗಾಯತರು ಒಂದಾಗಿ ನನ್ನನ್ನು ಬೆಂಬಲಿಸಿ ಎಂದು ಹೇಳಿದ್ದರು. ಇದೀಗ ಒಂದೇ ಸಮುದಾಯದ ಮತದಿಂದ ಚುನಾವಣೆ ಗೆಲ್ಲಲು ಆಗಲ್ಲ ಎಂದ ವಿನಯ್, ಉಪಚುನಾವಣೆ ಅಂದ್ಮೇಲೆ ಒತ್ತಡ ಹೆಚ್ಚಿಗೆ ಇರುತ್ತೆ. ಮುಖಂಡರು ಹೆಚ್ಚಾಗಿ ಪ್ರಚಾರಕ್ಕೆ ಬರುವ ಕಾರಣ ಅದರ ಅಬ್ಬರ ಜೋರಾಗಿ ಕಾಣಿಸುತ್ತದೆ ಎಂದು ತಿಳಿಸಿದರು.