ಹುಬ್ಬಳ್ಳಿ: ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಖ್ಯಾತಿ ಪಡೆದ ವಾಣಿಜ್ಯ ನಗರಿಯ ಕಿಮ್ಸ್ ಆಸ್ಪತ್ರೆ ಕಳೆದ ಬಾರಿ 101 ಕೋವಿಡ್ ಸೋಂಕಿತರಿಗೆ ಯಶಸ್ವಿ ಹೆರಿಗೆ ಮಾಡಿಸಿ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿತ್ತು. ಇದೀಗ 137 ಕೊರೊನಾ ಸೋಂಕಿತರಿಗೆ ಡಯಾಲಿಸಿಸ್ ಮಾಡುವ ಮೂಲಕ ಮತ್ತೊಂದು ದಾಖಲೆ ಬರೆದಿದೆ.
ಕಿಮ್ಸ್ ಆಸ್ಪತ್ರೆಯಿಂದ ಮತ್ತೊಂದು ಸಾಧನೆ...137 ಕೊರೊನಾ ಸೋಂಕಿತರಿಗೆ ಯಶಸ್ವಿ ಡಯಾಲಿಸಿಸ್
ಕಿಮ್ಸ್ ವೈದ್ಯರ ತಂಡ ಹಾಗೂ ಆಡಳಿತ ಮಂಡಳಿ ವರ್ಗದ ಪರಿಶ್ರಮದ ಫಲವಾಗಿ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾದ ರೋಗಿಗಳು ಶೇ. 100ರಷ್ಟು ಗುಣಮುಖರಾಗಿದ್ದಾರೆ.
ಡಾ. ರಾಮಲಿಂಗಪ್ಪ, ಕಿಮ್ಸ್ ನಿರ್ದೇಶಕ
400ಕ್ಕೂ ಹೆಚ್ಚು ಜನರಿಗೆ ಡಯಾಲಿಸಿಸ್ ಮಾಡಿದ್ದು, ಇದರಲ್ಲಿ 137 ಜನ ಕೊರೊನಾ ಸೋಂಕಿತರಿದ್ದರು ಎಂದು ತಿಳಿದು ಬಂದಿದೆ. ಕೋವಿಡ್ ದೃಢಪಟ್ಟಿದ್ದ ಶೇ. 10-15 ವ್ಯಕ್ತಿಗಳು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದುದ್ದರಿಂದ ಡಯಾಲಿಸಿಸ್ ಮಾಡುವುದು ಅನಿವಾರ್ಯವಾಗಿತ್ತು. ಇದೀಗ ತನ್ನ ಯಶಸ್ವಿ ಚಿಕಿತ್ಸೆಯೊಂದಿಗೆ ಕಿಮ್ಸ್ ಮತ್ತೊಂದು ಸಾಧನೆ ಮಾಡಿದಂತಾಗಿದೆ.
ಕಿಮ್ಸ್ ವೈದ್ಯರ ತಂಡ ಹಾಗೂ ಆಡಳಿತ ಮಂಡಳಿ ವರ್ಗದ ಪರಿಶ್ರಮದ ಫಲವಾಗಿ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾದ ರೋಗಿಗಳು ಶೇ. 100ರಷ್ಟು ಗುಣಮುಖರಾಗಿದ್ದಾರೆ.