ಕರ್ನಾಟಕ

karnataka

ETV Bharat / state

ತಾಕತ್ತಿದ್ದರೆ ನಿಮ್ಮ ಕ್ಷೇತ್ರದಲ್ಲಿರುವ ಧಾರ್ಮಿಕ ಕೇಂದ್ರ ತೆರವುಗೊಳಿಸಿ: ಸಿಎಂಗೆ ದಿಂಗಾಲೇಶ್ವರ ಸ್ವಾಮೀಜಿ ಸವಾಲು - Mysuru temple

ಮೈಸೂರು ದೇವಾಲಯ ತೆರವು ವಿವಾದ ಸಂಬಂಧ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗ್ತಿದೆ. ಇದೀಗ ದಿಂಗಾಲೇಶ್ವರ ಸ್ವಾಮೀಜಿ ಸಿಎಂ ಬೊಮ್ಮಾಯಿಗೆ ನೇರ ಸವಾಲು ಹಾಕಿದ್ದಾರೆ. ಸಿಎಂ ಕ್ಷೇತ್ರದಲ್ಲಿ ಮಾತ್ರ ಡಬಲ್ ರೋಡ್​ನಲ್ಲಿರುವ ಧಾರ್ಮಿಕ ಕಟ್ಟಡವನ್ನೂ ತೆರವುಗೊಳಿಸುವಂತೆ ಒತ್ತಾಯಿಸಿದ್ದಾರೆ.

Dhingaleswara swamiji challenge to CM Basavaraja Bommai
ಸಿಎಂಗೆ ದಿಂಗಾಲೇಶ್ವರ ಸ್ವಾಮಿ ಸವಾಲ್

By

Published : Sep 18, 2021, 2:29 PM IST

ಧಾರವಾಡ:ನಿಮಗೆ ತಾಕತ್ತಿದ್ದರೆ ನಿಮ್ಮ ಕ್ಷೇತ್ರದಲ್ಲೇ ಇರುವ ಧಾರ್ಮಿಕ ಕೇಂದ್ರವನ್ನು ತೆರವುಗೊಳಿಸಿ ಎಂದು ಮೈಸೂರು ದೇವಾಲಯ ತೆರವು ವಿವಾದ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧದಿಂಗಾಲೇಶ್ವರ ಸ್ವಾಮೀಜಿ ಆಕ್ರೋಶ ಹೊರಹಾಕಿದ್ದಾರೆ.

ಇಲ್ಲಿನ ಲಿಂಗಾಯತ ಭವನದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿಎಂ ಕ್ಷೇತ್ರದಲ್ಲಿ ಬೇರೊಂದು ಧರ್ಮದ ಧಾರ್ಮಿಕ ಕೇಂದ್ರ ಉಳಿಸಿದ್ದಾರೆ. ಜವಾಬ್ದಾರಿ ಇದ್ದಿದ್ದು ನಿಜವಾದರೆ ಇಲ್ಲಿಯೂ ಕ್ರಮ ಕೈಗೊಳ್ಳಿ. ಪುಣೆ-ಬೆಂಗಳೂರ ಹೆದ್ದಾರಿಯಲ್ಲಿರುವ ಬಂಕಾಪುರ ಬಳಿ ಆ ಧಾರ್ಮಿಕ ಕೇಂದ್ರ ಇದೆ ಎಂದಿದ್ದಾರೆ.

ತಾಕತ್ತಿದ್ದರೆ ನಿಮ್ಮ ಕ್ಷೇತ್ರದಲ್ಲಿರುವ ಧಾರ್ಮಿಕ ಕೇಂದ್ರ ತೆರವುಗೊಳಿಸಿ: ಸಿಎಂಗೆ ದಿಂಗಾಲೇಶ್ವರ ಸ್ವಾಮೀಜಿ ಸವಾಲು

ಸಿಎಂ ಕ್ಷೇತ್ರದಲ್ಲಿ ಮಾತ್ರ ಡಬಲ್ ರೋಡ್ ಮಾಡೋದು ನಿಲ್ಲಿಸಿದ್ದಾರೆ. ಬೇರೆ ಧರ್ಮದ ಧಾರ್ಮಿಕ ಸ್ಥಳ ಅಲ್ಲಿದೆ. ಆ ಧಾರ್ಮಿಕ ಸ್ಥಳ ಮುಟ್ಟಬಾರದು ಅಂತಾ ಕೈಬಿಟ್ಟಿದ್ದಾರೆ. ಹಿಂದೂ ದೇವಾಲಯ, ವೀರಶೈವ ಮಠಗಳನ್ನು ಬೇಕಾಬಿಟ್ಟಿ ಏನೇನೋ ಮಾಡುತ್ತಿದ್ದೀರಾ, ತೆರವುಗೊಳಿಸುವ ಕಾನೂನು ಪಾಲನೆ ಮಾಡುವವರಾದರೆ ಇಲ್ಲಿಯೂ ಕ್ರಮ ತೆಗೆದುಕೊಳ್ಳಿ ಎಂದು ಒತ್ತಾಯಿಸಿದ್ದಾರೆ.

ಬೇರೆ ಕಡೆ ತೆರವಿಗೆ ಅವಕಾಶ ಕೊಟ್ಟಿದ್ದೀರಿ. ಆದ್ರೆ ನಿಮ್ಮ ಸ್ವಂತ ಕ್ಷೇತ್ರದಲ್ಲಿ ಏನು ಮಾಡುತ್ತಿದ್ದೀರಿ? ನಡುರಸ್ತೆಯಲ್ಲೇ ಆ ಧಾರ್ಮಿಕ ಸ್ಥಳ ಇದೆ. ರಸ್ತೆ ಮಧ್ಯದಲ್ಲೇ ಇರೋದನ್ನು ನಾವು ಗುರುತಿಸಿದ್ದೇವೆ. ರಾಜ್ಯದಲ್ಲಿ ಎಷ್ಟು ದೇವಾಲಯ ನಾಶ ಮಾಡಿದ್ದೀರಿ. ಉಳಿದ ಧಾರ್ಮಿಕ ಸ್ಥಳ ಎಷ್ಟು ರಕ್ಷಣೆ ಮಾಡಿದ್ದೀರಿ? ಇದು ಯಾವ ಸಿದ್ಧಾಂತ? ಎಂದು ಸ್ವಾಮೀಜಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ಚಾಲೆಂಜಿಂಗ್ ಸ್ಟಾರ್ ದರ್ಶನ್​ ತೋಟದಲ್ಲಿ ಕಳ್ಳತನ.. ತಿ.ನರಸೀಪುರ ಠಾಣೆಯಲ್ಲಿ ದೂರು ದಾಖಲು

ABOUT THE AUTHOR

...view details