ಧಾರವಾಡ: ಸಿಎಂ ಬಿಎಸ್ವೈ ಸಂಪುಟ ವಿಸ್ತರಣೆ ಕುರಿತ ಚರ್ಚೆಗೆ ಮಾತ್ರ ತೆರಳಿಲ್ಲ. ಹೊರತಾಗಿ ಕೊರೊನಾ ಸಮಸ್ಯೆ ಸಂಬಂಧ ಚರ್ಚೆ ಮಾಡಲು ತೆರಳಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿದ್ದಾರೆ.
ಸಿಎಂ ಸಂಪುಟ ವಿಸ್ತರಣೆ-ಕೊರೊನಾ ಸಮಸ್ಯೆ ಕುರಿತು ಚರ್ಚೆ ನಡೆಸಿದ್ದಾರೆ: ಡಿಸಿಎಂ ಕಾರಜೋಳ - ಡಿಸಿಎಂ ಗೋವಿಂದ ಕಾರಜೋಳ ಇತ್ತೀಚಿನ ಸುದ್ದಿ
ಸಂಪುಟ ವಿಸ್ತರಣೆ ಮತ್ತು ಕೊರೊನಾ ಸಮಸ್ಯೆ ಬಗ್ಗೆ ಚರ್ಚಿಸಲು ಸಿಎಂ ಬಿಎಸ್ವೈ ದೆಹಲಿಗೆ ತೆರಳಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.
ಸಿಎಂ ದೆಹಲಿ ಪ್ರವಾಸದ ಬಗ್ಗೆ ಡಿಸಿಎಂ ಗೋವಿಂದ ಕಾರಜೋಳ ಪ್ರತಿಕ್ರಿಯೆ
ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿ ಪ್ರವಾಸ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, "ಪಕ್ಷದ ಅಧ್ಯಕ್ಷರು, ಪಕ್ಷ ಸಂಘಟನೆ ವಿಚಾರದ ಬಗ್ಗೆ ಚರ್ಚೆ ನಡೆಸಲು ದೆಹಲಿಗೆ ಕರೆದಿದ್ದಾರೆ. ಇದೊಂದು ಸಹಜ ಪ್ರಕ್ರಿಯೆ" ಎಂದರು.
ಇವುಗಳ ಜತೆಗೆ ಸಂಪುಟ ವಿಸ್ತರಣೆ ಅಜೆಂಡಾ ಸಹ ಇದೆ. ಈ ಕುರಿತು ಸಿಎಂ ಅವರು ರಾಷ್ಟ್ರೀಯ ಅಧ್ಯಕ್ಷರ ಜತೆಗೆ ಮಾತನಾಡುತ್ತಾರೆ. ಅಮಿತ್ ಶಾ ಜೊತೆಯಲ್ಲಿ ಚರ್ಚೆ ಮಾಡಿ, ಅನುಮತಿ ಪಡೆದು ಸಚಿವ ಸಂಪುಟ ವಿಸ್ತರಣೆ ಮಾಡಬೇಕಾಗುತ್ತದೆ ಎಂದರು.