ಕರ್ನಾಟಕ

karnataka

ETV Bharat / state

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸೈಕಲ್ ಜಾಥಾ.. ಧಾರವಾಡ ತಲುಪಿದ ಬೆಂಗಳೂರಿಗ - ಧಾರವಾಡದ ಜಯಕರ್ನಾಟಕ ಸಂಘಟನೆ

ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಬೆಂಗಳೂರಿನ ಯುವಕ ಆರಂಭಿಸಿರುವ ಸೈಕಲ್​ ಜಾಥಾ ಧಾರವಾಡ ತಲುಪಿದೆ. ಅತ್ಯಾಚಾರದಂತಹ ಘಟನೆಯಿಂದ ಮಹಿಳೆಯರ ರಕ್ಷಿಸುವಂತೆ ಕೋರಿ ಜಿಲ್ಲಾಧಿಕಾರಿಗೆ ಆತ ಮನವಿ ಸಲ್ಲಿಸಿದ್ದಾರೆ.

cycle-jatha-by-young-man-to-prevent-violence-against-women
ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸೈಕಲ್ ಜಾಥಾ

By

Published : Sep 23, 2021, 7:58 PM IST

ಧಾರವಾಡ: ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಬೇಕು ಎಂದು ಒತ್ತಾಯಿಸಿ ಹಾಗೂ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗುವಂತೆ ಆಗ್ರಹಿಸಿ ಯುವಕನೋರ್ವ ಕೈಗೊಂಡಿರುವ ಸೈಕಲ್​ ಜಾಥಾ ಧಾರವಾಡ ತಲುಪಿದೆ.

ಬೆಂಗಳೂರು ಮೂಲದ ಕಿರಣ್ ಈ ವಿಭಿನ್ನ ಅಭಿಯಾನಕ್ಕೆ ಮುಂದಾಗಿದ್ದು, ಧಾರವಾಡದ ಜಯಕರ್ನಾಟಕ ಸಂಘಟನೆ ಯುವಕನನ್ನು ಅದ್ದೂರಿಯಾಗಿ ಸ್ವಾಗತಿಸಿದೆ. ಈ ವೇಳೆ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ಹಾಗೂ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾನೆ.

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸೈಕಲ್ ಜಾಥಾ

ಕಿರಣ್ ಆ.22ರಿಂದ ಸೈಕಲ್ ಜಾಥಾ ಆರಂಭಿಸಿದ್ದು, ರಾಜ್ಯದ 31 ಜಿಲ್ಲೆಗಳಿಗೂ ಭೇಟಿ ನೀಡುವ ಗುರಿ ಇಟ್ಟುಕೊಂಡಿದ್ದಾರೆ. ಈಗಾಗಲೇ 14 ಜಿಲ್ಲೆಗಳ ಪ್ರವಾಸ ಮುಗಿಸಿದ್ದಾರೆ.

ಆತ ತಲುಪುವ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಭೇಟಿಯಾಗಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಮನವಿ ಮಾಡುತ್ತಿದ್ದಾರೆ.

ಇದನ್ನೂ ಓದಿ:ಪತ್ನಿ ನೇಣಿಗೆ ಶರಣಾಗುವುದನ್ನು ತಡೆಯುವ ಬದಲು ವಿಡಿಯೋ ಮಾಡಿ ವಿಕೃತಿ ಮೆರೆದ ಪತಿ

ABOUT THE AUTHOR

...view details