ಹುಬ್ಬಳ್ಳಿ:ತಂದೆಯ ಅಂತ್ಯ ಸಂಸ್ಕಾರಕ್ಕೆ ಮಗ ಬರಲು ಸಾಧ್ಯವಾಗದ ಕಾರಣದಿಂದ ಮಗಳೇ ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ ಘಟನೆ ಹುಬ್ಬಳ್ಳಿಯ ಕೇಶ್ವಾಪುರದ ಮುಕ್ತಿ ಧಾಮದಲ್ಲಿ ನಡೆದಿದೆ.
ಕೊರೊನಾ ಎಫೆಕ್ಟ್: ತಂದೆಯ ಚಿತೆಗೆ ಮಗಳಿಂದ ಅಗ್ನಿ ಸ್ಪರ್ಶ - daughter did the finel funeral
ಕೊರೊನಾ ಎಫೆಕ್ಟ್ ಬಿಸಿ ಅಂತ್ಯ ಸಂಸ್ಕಾರಕ್ಕೂ ತಟ್ಟಿದೆ. ಹುಬ್ಬಳ್ಳಿಯಲ್ಲಿ ಲಾಕ್ ಡೌನ್ನಿಂದಾಗಿ ತಂದೆಯ ಚಿತೆಗೆ ಮಗಳು ಅಗ್ನಿ ಸ್ಪರ್ಶ ಮಾಡಿದ್ದಾಳೆ.
ಅಗ್ನಿ ಸ್ಪರ್ಶ
ಕೊರೊನಾ ಎಫೆಕ್ಟ್ ಬಿಸಿ ಅಂತ್ಯ ಸಂಸ್ಕಾರಕ್ಕೂ ತಟ್ಟಿದೆ. ಲಾಕ್ ಡೌನ್ನಿಂದಾಗಿ ತಂದೆಯ ಚಿತೆಗೆ ಮಗಳು ಅಗ್ನಿ ಸ್ಪರ್ಶ ಮಾಡಿದ್ದಾಳೆ. ಲಾಕ್‌ಡೌನ್‌ನಿಂದ ಲಕ್ಷ್ಮೇಶ್ವರದಲ್ಲಿ ಮಗ ಬ್ಲಾಕ್ ಆಗಿದ್ದಾನೆ. ಇತ್ತ ತಂದೆ ಎನ್.ಎ. ಚವ್ಹಾಣ್ ಎಂಬುವವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಹೀಗಾಗಿ ಮಗನ ಅನುಪಸ್ಥಿತಿಯಲ್ಲಿ ಮಗಳಿಂದಲೇ ಅಂತಿಮ ವಿಧಿ ವಿಧಾನ ನಡೆಸಲಾಯಿತು.
ಚವ್ಹಾಣ್ ಕುಟುಂಬದ ಐದಾರು ಜನರು ಮಾತ್ರ ಈ ಕಾರ್ಯದಲ್ಲಿ ಭಾಗಿಯಾಗಿದ್ದರು. ಕೊರೊನಾ ಭಯಕ್ಕೆ ಅಂತ್ಯಸಂಸ್ಕಾರದಲ್ಲಿ ಜನರು ಕೂಡ ಭಾಗವಹಿಸಿರಲಿಲ್ಲ.
Last Updated : Mar 30, 2020, 8:40 PM IST