ಧಾರವಾಡ : ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗದ ಕಂಡಕ್ಟರ್ ಬಸವರಾಜ ನೀಲಪ್ಪ ಗಾಣಿಗೇರ ತಮ್ಮ ಒಂದು ತಿಂಗಳ ವೇತನ 25 ಸಾವಿರವನ್ನು ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.
ಮಾನವೀಯತೆ ಮೆರೆದ ಕಂಡಕ್ಟರ್: ಟಿಕೆಟ್ ಕೊಡುವ ಕೈನಿಂದ ಕೋವಿಡ್ ನಿಧಿಗೆ ಪೂರ್ತಿ ಸಂಬಳ - cm relief fund
ಕಂಡಕ್ಟರ್ ಶಿರಕೋಳ ಗ್ರಾಮದ ಬಸವರಾಜ ನೀಲಪ್ಪ ಗಾಣಿಗೇರ ತಮ್ಮ ಒಂದು ತಿಂಗಳ ವೇತನ 25 ಸಾವಿರ ರೂಪಾಯಿಗಳನ್ನು ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.
ಮಾನವೀಯತೆ ಮೆರೆದ ಕಂಡಕ್ಟರ್
ಈ ಹಣವನ್ನು ಚೆಕ್ ಮೂಲಕ ಜಿಲ್ಲಾಧಿಕಾರಿ ದೀಪಾ ಚೋಳನ್ಗೆ ಸಲ್ಲಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಜಿಲ್ಲಾಧಿಕಾರಿ, ಸಾರಿಗೆ ಸಂಸ್ಥೆಯ ಕಂಡಕ್ಟರ್ ಒಬ್ಬರು ಸ್ವಯಂ ಪ್ರೇರಣೆಯಿಂದ ತಮ್ಮ 1 ತಿಂಗಳ ವೇತನವನ್ನು ಸರ್ಕಾರದ ಕೋವಿಡ್ ಪರಿಹಾರ ನಿಧಿಗೆ ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಸಾರಿಗೆ ವಿಭಾಗೀಯ ನಿಯಂತ್ರಕ ವಿವೇಕಾನಂದ ವಿಶ್ವಜ್ಞ, ಹನುಮಂತ ಬೋಜೇದಾರ್ ಸೇರಿದಂತೆ ಹಲವರಿದ್ದರು.