ಕರ್ನಾಟಕ

karnataka

ETV Bharat / state

ಸ್ಮಾರ್ಟ್ ಸಿಟಿ ಹೆಸರಲ್ಲಿ ಮಹಾ ದೋಖಾ ಆರೋಪ: ಲೋಕಾಯುಕ್ತಕ್ಕೆ ದೂರು - ಅವಳಿನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಸಾಕಷ್ಟು ಚುರುಕುಗೊಂಡಿದೆ‌

ಒಂದು ಉದ್ಯಾನವನ್ನು ಆರಂಭಿಕ ಹಂತದಲ್ಲಿಯೇ ನಿರ್ಮಾಣ ಮಾಡಿ ಅಭಿವೃದ್ಧಿ ಮಾಡಲು ಸಿಂಗಲ್ ಡಿಜಿಟ್ ನಲ್ಲಿರುವ ಕೋಟಿ ಅನುದಾನ ಸಾಕು. ಆದರೆ, ಹಳೆಯ ಮಣ್ಣಿನ ಗೋಡೆಗೆ ಬಣ್ಣ ಬಳೆದು ಸುಮಾರು 26.11 ಕೋಟಿ ಸಾರ್ವಜನಿಕ ಹಣವನ್ನು ಪೋಲು ಮಾಡಿರುವ ಆರೋಪ ಕೇಳಿಬಂದಿದೆ.

ಹುಬ್ಬಳ್ಳಿಯ ಸ್ಮಾರ್ಟ್ ಸಿಟಿ ಹೆಸರಲ್ಲಿ ಮಹಾ ದೋಖಾ
ಹುಬ್ಬಳ್ಳಿಯ ಸ್ಮಾರ್ಟ್ ಸಿಟಿ ಹೆಸರಲ್ಲಿ ಮಹಾ ದೋಖಾ

By

Published : Jul 18, 2022, 5:54 PM IST

Updated : Jul 18, 2022, 7:04 PM IST

ಹುಬ್ಬಳ್ಳಿ: ಅವಳಿನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಸಾಕಷ್ಟು ಚುರುಕುಗೊಂಡಿದೆ‌. ಆದರೆ, ಈ ಚುರುಕಿನ ಹಿಂದೇ ಒಂದು ಬಹುದೊಡ್ಡ ಬಿರುಕು ಇರುವುದು ಬೆಳಕಿಗೆ ಬಂದಿದೆ. ಹಳೆಯ ಗೋಡೆಗೆ ಸುಣ್ಣ ಬಣ್ಣವನ್ನು ಬಳೆದು ಹಣವನ್ನು ಲೂಟಿ ಮಾಡಿರುವ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತಂತೆ ಲೋಕಾಯುಕ್ತಕ್ಕೆ ಪ್ರಜ್ಞಾವಂತರು ದೂರು ನೀಡಿದ್ದಾರೆ.

ಒಂದು ಉದ್ಯಾನವನ್ನು ಆರಂಭಿಕ ಹಂತದಲ್ಲಿಯೇ ನಿರ್ಮಾಣ ಮಾಡಿ ಅಭಿವೃದ್ಧಿಪಡಿಸಲು ಸಿಂಗಲ್ ಡಿಜಿಟ್ ನಲ್ಲಿರುವ ಕೋಟಿ ರೂಪಾಯಿ ಅನುದಾನ ಸಾಕು. ಆದರೆ, ಹಳೆಯ ಮಣ್ಣಿನ ಗೋಡೆಗೆ ಬಣ್ಣ ಬಳೆದು ಸುಮಾರು 26.11 ಕೋಟಿ ಸಾರ್ವಜನಿಕ ಹಣವನ್ನು ಪೋಲು ಮಾಡಿರುವುದು ಈಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಹೌದು, ಮಹಾತ್ಮ ಗಾಂಧಿ ಉದ್ಯಾನವನ ಹಾಗೂ ಇಂದಿರಾ ಗಾಜಿನ ಮನೆ ಆವರಣದ ಕಾಮಗಾರಿಯಲ್ಲಿ‌ ಕೋಟಿ ಕೋಟಿ ಹಣ ಲಪಟಾಯಿಸಿರುವ ಆರೋಪ ಕೇಳಿ ಬಂದಿದೆ. ಸಾರ್ವಜನಿಕ ಹಣವನ್ನು ಲೂಟಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ಮಾಡುವಂತೆ ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.

ಸ್ಮಾರ್ಟ್ ಸಿಟಿ ಹೆಸರಲ್ಲಿ ಮಹಾ ದೋಖಾ ಆರೋಪ: ಲೋಕಾಯುಕ್ತಕ್ಕೆ ದೂರು

ಇರುವ ಗೋಡೆಗಳಿಗೆ ಸುಣ್ಣ ಬಣ್ಣ ಬಳೆದಿದ್ದು, ಮೊದಲು ಇದ್ದ ಕಾರಂಜಿಗೆ ಸ್ವಲ್ಪ ಪ್ರಮಾಣದ ಅಧುನಿಕರಣಗೊಳಿಸಿದ್ದಾರೆ. ಅಲ್ಲದೆ ಫುಟ್ ಪಾಥ್ ಗಳಿಗೂ ಬಣ್ಣ ಬಳೆದು ಜನರಿಗೆ ಹಗಲಿನಲ್ಲಿಯೇ ನಕ್ಷತ್ರಗಳನ್ನು ತೋರಿಸುವ ರೀತಿಯಲ್ಲಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಹಭಾಗಿತ್ವದಲ್ಲಿ ಜನರ ದುಡ್ಡಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದು, ಸ್ಮಾರ್ಟ್ ಸಿಟಿ ವ್ಯವಸ್ಥಾಪಕರ ವಿರುದ್ಧ ಕೂಡ ದೂರನ್ನು ಸಲ್ಲಿಸಿದ್ದಾರೆ.

ಒಂದೇ ಉದ್ಯಾನವನಕ್ಕೆ ಇಷ್ಟೊಂದು ದುಡ್ಡು ಅವಶ್ಯಕತೆ ಇದೆಯೇ ಎಂಬುವಂತ ಮಾಹಿತಿಯನ್ನು ಅಧಿಕಾರಿಗಳಿಗೆ ಕೇಳಿದರೂ ಕೂಡ ಸಮರ್ಪಕ ಮಾಹಿತಿ ಲಭ್ಯವಾಗುತ್ತಿಲ್ಲ. ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಮಹಾತ್ಮ ಗಾಂಧೀಜಿ ಉದ್ಯಾನವನ ವೇದಿಕೆ ಆಗ್ರಹಿಸಿದೆ.

ಸ್ಮಾರ್ಟ್ ಸಿಟಿ ಹೆಸರಲ್ಲಿ ಜನರ ಹಣವನ್ನು ಬೇಕಾಬಿಟ್ಟಿಯಾಗಿ ಖರ್ಚು ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ. ಈ ಬ್ರಹ್ಮಾಂಡ ಭ್ರಷ್ಟಾಚಾರದ ಹಿಂದೆ ಯಾವ ಕಾಣದ ಕೈಗಳ ಕೈವಾಡವಿದೆ ಎಂಬುದು ಲೋಕಾಯುಕ್ತದ ತನಿಖೆಯ ನಂತರವೇ ಬಯಲಿಗೆ ಬರಬೇಕಿದೆ.

ಇದನ್ನೂ ಓದಿ:ಮಹಿಳೆಯೊಂದಿಗೆ ಅನುಚಿತ ವರ್ತನೆ ಆರೋಪ: ಮಾಜಿ ಸೈನಿಕನ ಬಂಧನ

Last Updated : Jul 18, 2022, 7:04 PM IST

For All Latest Updates

TAGGED:

ABOUT THE AUTHOR

...view details