ಮೀಸಲಾತಿ ವಿಚಾರ: ಎಲ್ಲರಿಗೂ ನ್ಯಾಯ ಸಿಗುವಂತೆ ಸಿಎಂ ಬೊಮ್ಮಾಯಿ ದೃಢ ಹೆಜ್ಜೆ ಇಡುತ್ತಿದ್ದಾರೆ: ಜೋಶಿ - ಯುವಜನೋತ್ಸವ ದಿನಾಂಕ ಬದಲಿ ಮಾಡಲು ಆಗಲ್ಲ
ಸಿಎಂ ಮಂತ್ರಿಮಂಡಲ ವಿಸ್ತರಣೆಗೆ ವಿಸ್ತೃತ ವರದಿ ತಯಾರಿಸಿದ್ದು, ಬೇಡಿಕೆಗೆ ತಕ್ಕಂತೆ ಕ್ಯಾಬಿನೆಟ್ ವಿಸ್ತರಿಸುವರು. ರಾಹುಲ್ ಗಾಂಧಿ ಎದುರು ಮಾಜಿ ಸಿಎಂ ಸಿದ್ಧರಾಮಯ್ಯ ಕೈಕಟ್ಟಿ ನಿಲ್ಲಿತ್ತಿದ್ದರು ಎಂದು ಟಾಂಗ್ ಕೊಟ್ಟ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ ಜೋಶಿ
By
Published : Jan 6, 2023, 9:53 PM IST
|
Updated : Jan 6, 2023, 10:28 PM IST
ಎಲ್ಲರಿಗೂ ನ್ಯಾಯ ಸಿಗುವಂತೆ ಸಿಎಂ ಬೊಮ್ಮಾಯಿ ದೃಢ ಹೆಜ್ಜೆ ಇಡುತ್ತಿದ್ದಾರೆ: ಜೋಶಿ
ಧಾರವಾಡ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಎಲ್ಲರಿಗೂ ನ್ಯಾಯ ಸಿಗುವಂತೆ ದೃಢ ಹೆಜ್ಜೆ ಹಾಕುತ್ತಿದ್ದಾರೆ. ಅದನ್ನು ಏನೇನೋ ಆರೋಪ ಮಾಡಿ ತಪ್ಪು ದಾರಿಗೆ ಎಳೆಯಬಾರದು ಎಂದು ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಿಎಂ ಮಂತ್ರಿಮಂಡಲ ವಿಸ್ತರಣೆಗೆ ತೀರ್ಮಾನ ಮಾಡಿದ್ದಾರೆ. ನಾನೂ ಬಿಜೆಪಿ ಶಾಸಕರಲ್ಲಿ ಒಂದು ವಿನಂತಿ ಮಾಡುತ್ತೇನೆ, ಸಿಎಂ ಕ್ಯಾಬಿನೆಟ್ ವಿಸ್ತರಣೆ ವೇಳೆ ಯಾರ ಯಾರ ಕಡೆಯಿಂದ ಬೇಡಿಕೆ ಬಂದಿದೆ ಎಂದು ಸಿಎಂ ವಿಸ್ತ್ರತ ವರದಿ ಈಗಾಗಲೇ ತಯಾರು ಮಾಡಿಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಅವರು ಮುಂದುವರಿಯುವರು. ಸಿಎಂ ಮೇಲೆ ವಿಶ್ವಾಸವಿಟ್ಟು ಆಕಾಂಕ್ಷಿತರು ಮುಂದುವರಿಯಬೇಕು ಎಂದು ಎಲ್ಲರಲ್ಲೂ ವಿನಂತಿ ಮಾಡುವೆ ಎಂದು ತಿಳಿಸಿದರು.
ಐಐಟಿ ಉದ್ಘಾಟನೆ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆಸಿದ ಅವರು, ಐಐಟಿ ಉದ್ಘಾಟನೆ ಜನವರಿಯಲ್ಲಿ ಮಾಡಬೇಕೆಂಬ ವಿಚಾರ ಇತ್ತು. ಆದರಲ್ಲಿ ಸ್ವಲ್ಪ ಕೆಲಸ ಉಳಿದಿರುವುದರಿಂದ ಅದರ ಕುರಿತಾಗಿ ಪ್ರಧಾನಿ ಅವರ ಗಮನಕ್ಕೆ ತಂದಿರುವೆ. ಯುವಜನೋತ್ಸವ ದಿನಾಂಕ ಬದಲಿ ಮಾಡಲು ಆಗಲ್ಲ, ಅದಕ್ಕಾಗಿ ಪ್ರಧಾನಿ ಮೋದಿ ಅವರು, ಹುಬ್ಬಳ್ಳಿ ಧಾರವಾಡ ನಗರಕ್ಕೆ ಬರಲು ದಿನಾಂಕ ಕೊಡುವ ಮಾತನ್ನು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸ್ಯಾಂಟ್ರೋ ರವಿ ವಿಚಾರ: ಸ್ಯಾಂಟ್ರೋ ರವಿ ಯಾರು? ಏನು? ಎಂಬ ಬಗ್ಗೆ ಸಿಎಂ ಈಗಾಗಲೇ ಹೇಳಿದ್ದಾರೆ. ಅವರ ಜತೆಗೆ ಯಾರ ಸಂಪರ್ಕವೂ ಇಲ್ಲ ಎನ್ನುವುದನ್ನೂ ತಿಳಿಸಿದ್ದಾರೆ. ಯಾವುದೇ ಆಧಾರ ಇರಲಾರದೇ ಈ ರೀತಿ ಒಬ್ಬರು ನಾಯಿ ಎಂದು ಮಾತನಾಡುವುದು, ಇನ್ನೊಬ್ಬರು ಸ್ಯಾಂಟ್ರೋ ರವಿ ಎಂದು ಮಾತನಾಡುವುದು ಸಮಂಜಸವಲ್ಲ. ವಿಧಾನಸಭೆ ಚುನಾವಣೆ ಬಂದಿದೆ ಎಂಬ ಕಾರಣಕ್ಕೆ ಚಿಲ್ಲರೆ ಲೆವಲ್ಗೆ ಇಳಿಯಬಾರದು ಎಂದು ಪ್ರತಿಪಕ್ಷದವರಿಗೆ ಕೇಂದ್ರ ಸಚಿವರು ಟಾಂಗ್ ಕೊಟ್ಟರು.
ರಾಹುಲ್ ಗಾಂಧಿ ಎದುರು ಸಿದ್ದರಾಮಯ್ಯ ಕೈಕಟ್ಟಿ ನಿಲ್ಲುತ್ತಿದ್ದರು:ಸಿದ್ದರಾಮಯ್ಯ ಬಗ್ಗೆ ಏನೇ ಇದ್ದರೂ ಲೀಡರ್ ಆಗಿ ಒಂದು ಗೌರವವಿದೆ. ರಾಹುಲ್ ಗಾಂಧಿ ಎದುರು ಇವರ ಕೈಕಟ್ಟಿ ಕುಳಿತುಕೊಳ್ಳುತ್ತಾರೆ, ಆದರೆ ಬೊಮ್ಮಾಯಿ ಬಗ್ಗೆ ಮಾತನಾಡುತ್ತಾರೆ. ನರೇಂದ್ರ ಮೋದಿ, ಒಬ್ಬ ಚುನಾಯಿತ ನಾಯಕರು. ಜನರಿಂದ ಚುನಾಯಿತರಾದವರು, ಸಿಲೆಕ್ಟೆಡ್ ಅಲ್ಲ, ಇಲೆಕ್ಟಡ್ ಪರ್ಸನ್. ನೀವು ಸಿಲೆಕ್ಟಡ್ ನಾಯಕರು 11 ಬಜೆಟ್ ಮಂಡಿಸಿದವರು, ರಾಹುಲ್ ಗಾಂಧಿ ಎದುರು ಕೈಕಟ್ಟಿ ನಿಲ್ಲುತ್ತಿದ್ದರಲ್ಲರೀ ಎಂದು ಸಿದ್ದರಾಮಯ್ಯ ಅವರಿಗೆ ಜೋಶಿ ಟಾಂಗ್ ಕೊಟ್ಟರು.
ಯುಪಿಐ ಸರಕಾರ ಇದ್ದಾಗ ಸಿದ್ಧರಾಮಯ್ಯ ಅವರಿಗೆ ಅಪಾಯನ್ಮೆಂಟ್ ಸಿಗುತ್ತಿರಲಿಲ್ಲ. ಇವತ್ತು ಮೋದಿ ಸಾಹೇಬರು ಪ್ರಜಾಪ್ರಭುತ್ವದಡಿ ಆಯ್ಕೆ ಆಗಿ ಹೋದವರು. ಯಾರೋ ಹೋದ್ರೋ ಸಹಿತ ನಿಮ್ಮ ರಾಜ್ಯದ ಸಮಸ್ಯೆಗಳೇನಾದರೂ ಇದ್ದರೆ ಅದನ್ನ ಸಾವಧಾನದಿಂದ ಕೇಳ್ತಾರ. ಮೋದಿಯವರು ಮುಖ್ಯಮಂತ್ರಿ ಆಗಿ ರಾಜ್ಯದಲ್ಲಿ ಆಡಳಿತ ಮಾಡಿ ಬಂದವರು ಎಂದು ಇದೇ ವೇಳೆ ಕೇಂದ್ರ ಸಚಿವ ಜೋಶಿ ಪ್ರತಿಪಕ್ಷಗಳ ನಾಯಕರಿಗೆ ನೆನಪು ಮಾಡಿಕೊಟ್ಟರು.
ಕುಮಾರಸ್ವಾಮಿ ಪಾರ್ಟಿ ಫಾರ್ ದಿ ಫ್ಯಾಮಿಲಿ: ದೂರು ನೀಡುಬಹುದಲ್ಲ, ಸ್ಯಾಂಟ್ರೋ ರವಿ, ಸೈಲೆಂಟ್ ಸುನೀಲ ಏನು ಎನ್ನವುದು ಗೊತ್ತಿಲ್ಲದೇ ಆರೋಪ ಮಾಡಬಾರದು. ಯಾರ ಮೇಲೆಯೂ ಆರೋಪ ಮಾಡಬೇಕಾದರೂ ನಾವು ಆ ಲೆವಲ್ಗೆ ಹೋಗುವುದಿಲ್ಲ. ಕುಮಾರಸ್ವಾಮಿ ಪಾರ್ಟಿ ಎಂದರೆ ಫಾರ್ ದಿ ಫ್ಯಾಮಿಲಿ, ಆಫ್ ದಿ ಫ್ಯಾಮಿಲಿ, ಬೈ ದಿ ಫ್ಯಾಮಿಲಿ ಎಂದು ಟೀಕಿಸಿದರು. ಇದನ್ನೂಓದಿ:ಗಡಿ ವಿಚಾರ: 'ರಾಜಕಾರಣಿಗಳು ದೊಡ್ಡ ಮನಸ್ಸು ಮಾಡಿ ವ್ಯವಸ್ಥೆ ಸರಿಪಡಿಸಬೇಕು'- ಶಿವಣ್ಣ