ಧಾರವಾಡ:ನಗರ ಸಮೀಪದ ಕೆಲಗೇರಿ ವ್ಯಾಪ್ತಿಯಲ್ಲಿ ಔತಣಕೂಟಕ್ಕೆ ಎರಡು ಕಾರುಗಳಲ್ಲಿ ಹೊರಟಿದ್ದ ಎಂಟು ಜನರ ವಿರುದ್ಧ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎರಡು ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಮೋಜು ಮಸ್ತಿ... ಧಾರವಾಡದಲ್ಲಿ ಪಾರ್ಟಿ ಮಾಡಲು ಹೊರಟವರ ವಿರುದ್ಧ ಬಿತ್ತು ಕೇಸ್ - Dharwad twocar seized
ಧಾರವಾಡದಲ್ಲಿ ಔತಣಕೂಟಕ್ಕೆಂದು ಎರಡು ಕಾರಿನಲ್ಲಿ ಹೊರಟಿದ್ದ ಎಂಟು ಜನರ ವಿರುದ್ಧ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಎರಡು ಕಾರು ವಶ
ನಗರದ ಗ್ರಾಮೀಣ ಸಿಪಿಐ ಎಂ.ಸಿ. ಪಾಟೀಲ್ ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ 1817 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು 4,91,200 ರೂಪಾಯಿ ದಂಡ ಸಂಗ್ರಹಿಸಲಾಗಿದೆ.