ಕಟ್ಟಡ ಕುಸಿತ ದುರಂತ... ಮಾಧ್ಯಮಗಳಿಂದ ಆರೋಪಿಯನ್ನು ಮರೆಮಾಚಿದ ಪೊಲೀಸರು! - ಮಾಧ್ಯಮ
ಕ್ಯಾಮರಾಗಳನ್ನು ನೋಡಿದ ಅವರು ಆ ಕ್ಷಣವೇ ಕ್ಯಾಮರಾ ತಳ್ಳಿ ಆರೋಪಿಯನ್ನು ಅಲ್ಲಿಂದ ಕರೆದುಕೊಂಡು ಹೋದರು. ಇದನ್ನು ಡಿಸಿಪಿ ನಾಗೇಶ್ ಅವರು ಸಮರ್ಥಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮದವರ ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ಕೂಡ ನಡೆಯಿತು.
ಆರೋಪಿ ವಿವೇಕ್ ಪವಾರ್
ಧಾರವಾಡ: ನಗರದಲ್ಲಿ ಬಹುಮಹಡಿ ಕಟ್ಟಡ ಕುಸಿದು ಹದಿನೈದು ಜನರ ಸಾವಿಗೆ ಕಾರಣವಾಗಿರುವ ಆ ಕಟ್ಟಡದ ಎಂಜಿನೀಯರ್ ವಿವೇಕ್ ಪವಾರ್ ಅವರ ಮುಖವನ್ನು ಮಾಧ್ಯಮಗಳಲ್ಲಿ ತೋರಿಸದಂತೆ ಧಾರವಾಡ ಪೊಲೀಸರು ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದ್ದಾರೆ.ಆರೋಪಿ ವಿವೇಕ್ ಪವಾರ್ನ್ನು ಇಂದು ತೆರವು ಕಾರ್ಯಾಚರಣೆಯ ಮಧ್ಯೆಯೇ ಸ್ಥಳ ಮಹಜರಿಗಾಗಿ ಉಪನಗರ ಠಾಣೆ ಪೊಲೀಸರು ಕಟ್ಟಡ ಬಿದ್ದ ಸ್ಥಳಕ್ಕೆ ಕರೆದುಕೊಂಡು ಬಂದಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ಆರೋಪಿ ವಿವೇಕ್ ಪವಾರ್ ಶೂಟಿಂಗ್ ಮಾಡಲು ಉಪನಗರ ಠಾಣೆಯ ಇನ್ಸ್ಪೆಕ್ಟರ್ ಶಿವಾನಂದ ಬಸಾಪುರ ಮಾಧ್ಯಮದವರನ್ನು ತಡೆದಿದ್ದಾರೆ.
ಕ್ಯಾಮರಾಗಳನ್ನು ನೋಡಿದ ಅವರು ಆ ಕ್ಷಣವೇ ಕ್ಯಾಮರಾ ತಳ್ಳಿ ಆರೋಪಿಯನ್ನು ಅಲ್ಲಿಂದ ಕರೆದುಕೊಂಡು ಹೋದರು. ಇದನ್ನು ಡಿಸಿಪಿ ನಾಗೇಶ್ ಅವರು ಸಮರ್ಥಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮದವರ ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ಕೂಡ ನಡೆಯಿತು.