ಧಾರವಾಡ: ಮತದಾರರು ಅನರ್ಹರನ್ನು ಅರ್ಹರನಾಗಿ ಮಾಡಿದ್ದಾರೆ. ಮತದಾರರ ತೀರ್ಪಿಗೆ ನಾವು ಬದ್ದರಾಗಿದ್ದೇವೆ ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಮತದಾರರು ತಿರಸ್ಕಾರ ಮಾಡಿದ್ದಾರೆ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಮತದಾರರು ಅನರ್ಹರನ್ನು ಅರ್ಹ ಮಾಡಿದ್ದಾರೆ: ಬಸವರಾಜ ಹೊರಟ್ಟಿ - ಮಾಜಿ ಸಭಾಪತಿ ಬಸವರಾಜ ಹೊರಟ್ಟಿ
ನಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡಿದ್ರೆ ಇಂತಹ ಪರಸ್ಥಿತಿ ಬರುತಿರಲ್ಲಿಲ್ಲ, ಸಮ್ಮಿಶ್ರ ಸರ್ಕಾರ ಬಂದ್ರೆ ಮತ್ತೆ ತೊಂದರೆ ಆಗುತ್ತೆ ಎಂದು ಮತದಾರರು ಬಿಜೆಪಿಗೆ ಬಹುಮತ ನೀಡಿರಬಹುದು ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡಿದ್ರೆ ಇಂತಹ ಪರಸ್ಥಿತಿ ಬರುತಿರಲ್ಲಿಲ್ಲ, ಸಮ್ಮಿಶ್ರ ಸರ್ಕಾರ ಬಂದ್ರೆ ಮತ್ತೆ ತೊಂದರೆ ಆಗುತ್ತೆ ಎಂದು ಮತದಾರರು ಬಿಜೆಪಿಗೆ ಬಹುಮತ ನೀಡಿರಬಹುದು ಎಂದು ಉಪಚುನಾವಣೆಗೆ ಫಲಿತಾಂಶ ಸ್ವಾಗತಿಸಿದ್ದಾರೆ.
ರಾಜಕೀಯದಲ್ಲಿ ಇಂದು ಎಥಿಕ್ಸ್ ಇಲ್ಲ. ಕಾಲವೇ ಬದಲಾವಣೆ ಮಾಡಬೇಕು. ಸೋಲಿನ ಬಗ್ಗೆ ವಿಮರ್ಶೆ ಮಾಡಿದ್ರೆ ಒಬ್ಬರ ಮೇಲೆ ಒಬ್ಬರು ಬೈಯುವುದಾಗುತ್ತೆ. ಅಧಿಕಾರ ಇಲ್ಲವಾದ್ರು ಜನರ ಕೆಲಸ ಮಾಡುವತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಮುಂದಾಗಬೇಕು. ಬಿಜೆಪಿಗೆ ಬಹುಮತ ಸಿಗದಿದ್ರೆ ಜೆಡಿಎಸ್ ಇಬ್ಬಾಗವಾಗುತ್ತಿತ್ತು, ಆದ್ರೆ ಈಗ ಆ ಪ್ರಶ್ನೆ ಉದ್ಭವ ಆಗುವುದಿಲ್ಲ ಎಂದು ಧಾರವಾಡದಲ್ಲಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.