ಹುಬ್ಬಳ್ಳಿ: ಬಕ್ರೀದ್ ನಿಮಿತ್ತ ಮುಸ್ಲಿಂ ಬಾಂಧವರು ಮಸೀದಿಯಲ್ಲಿ ಈದ್ ನಮಾಜ್ ಮಾಡುವ ಮೂಲಕ ಶಾಂತಿ ಮತ್ತು ಸೌಹಾರ್ದತೆಯಿಂದ ಹಬ್ಬ ಆಚರಿಸಿದರು.
ಪರಸ್ಪರ ಅಪ್ಪಿಕೊಳ್ಳದೇ ಬಕ್ರೀದ್ ಶುಭಾಶಯ ತಿಳಿಸಿದ ಮುಸ್ಲಿಂ ಬಾಂಧವರು - ಶುಭಾಶಯ ತಿಳಿಸಿದ ಮುಸ್ಲಿಂ ಬಾಂಧವರು
ಸಾಮೂಹಿಕ ಪ್ರಾರ್ಥನೆ ಮತ್ತು ಆ ನಂತರ ಭಾಂದವ್ಯದ ಪ್ರತೀಕವಾದ ಪರಸ್ಪರ ಅಪ್ಪುಗೆಯನ್ನು ಕೈಬಿಟ್ಟು, ಇದೇ ಮೊದಲ ಬಾರಿಗೆ ತಮ್ಮ ಪ್ರೀತಿ ಮತ್ತು ಶುಭಾಶಯವನ್ನು ತಿಳಿಸಿರುವುದಾಗಿ ಮುಸ್ಲಿಂ ಮುಖಂಡರು ತಿಳಿಸಿದ್ದಾರೆ
ತ್ಯಾಗ ಮತ್ತು ಬಲಿದಾನದ ಸಂಕೇತವೇ ಈ ಬಕ್ರೀದ್ ಹಬ್ಬವಾಗಿದ್ದು, ವಿಶ್ವದಾದ್ಯಂತ ಕೊರೊನಾ ಹಾವಳಿ ಹೆಚ್ಚಾಗಿದ್ದರಿಂದ ಕೋವಿಡ್ ನಿಯಮ ಪಾಲಿಸಿ ಹಬ್ಬ ಆಚರಣೆ ಮಾಡಿದ್ದೇವೆ. ಕೊರೊನಾ ಹಿನ್ನೆಲೆ ಈ ವರ್ಷ ಹಬ್ಬವನ್ನು ಸರಳ ಮತ್ತು ಶಾಂತ ರೀತಿಯಲ್ಲಿ ಸರ್ಕಾರ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಮಾರ್ಗ ಸೂಚಿಯಂತೆ ಆಚರಣೆ ಮಾಡಲಾಯಿತು ಎಂದು ಮುಸ್ಲಿಂ ಮುಖಂಡರು ತಿಳಿಸಿದರು.
ಹಬ್ಬಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮತ್ತು ಆನಂತರ ಬಾಂಧವ್ಯದ ಪ್ರತೀಕವಾದ ಪರಸ್ಪರ ಅಪ್ಪುಗೆಯನ್ನು ಕೈಬಿಟ್ಟು, ಇದೇ ಮೊದಲ ಬಾರಿಗೆ ಪರಸ್ಪರ ಅಪ್ಪಿಕೊಳ್ಳದೇ ತಮ್ಮ ಪ್ರೀತಿ ಮತ್ತು ಶುಭಾಶಯವನ್ನು ತಿಳಿಸಿರುವುದಾಗಿ ಅವರು ತಿಳಿಸಿದರು.