ಕರ್ನಾಟಕ

karnataka

ETV Bharat / state

ನಾಳೆ ಹುಬ್ಬಳ್ಳಿಗೆ ಅಮಿತ್ ಶಾ... ಪೌರತ್ವ ಕಾಯ್ದೆ ಬಗ್ಗೆ ಜನಜಾಗೃತಿ - ಎಂಟು ಕಡೆ ಎಲ್‌ಇಡಿ ಪರದೆ

ಪೌರತ್ವ ಕಾಯ್ದೆ ಬಗ್ಗೆ ಜನಜಾಗೃತಿ ಮೂಡಿಸಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ ನಾಳೆ ಹುಬ್ಬಳ್ಳಿಗೆ ಬರಲಿರುವ ಹಿನ್ನೆಲೆಯಲ್ಲಿ, ಕಾರ್ಯಕ್ರಮ ನಡೆಯುವ ನೆಹರೂ ಕ್ರೀಡಾಂಗಣಕ್ಕೆ ಭದ್ರತೆ ಹೆಚ್ಚಿಸಲಾಗಿದ್ದು, ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

Kn_hbl_01_sha_program_sidate_av_7208089
ನಾಳೆ ಹುಬ್ಬಳ್ಳಿಗೆ ಎಂಟ್ರಿ ಕೊಡಲಿರೋ ಅಮಿತ್ ಶಾ, ಪೌರತ್ವ ಕಾಯ್ದೆ ಬಗ್ಗೆ ಜನಜಾಗೃತಿ

By

Published : Jan 17, 2020, 12:40 PM IST

ಹುಬ್ಬಳ್ಳಿ:ಪೌರತ್ವ ಕಾಯ್ದೆ ಬಗ್ಗೆ ಜನಜಾಗೃತಿ ಮೂಡಿಸಲು ಕೇಂದ್ರ ಗೃಹಸಚಿವ ಅಮಿತ್‌ ಶಾ ನಾಳೆ ಹುಬ್ಬಳ್ಳಿಗೆ ಬರಲಿರುವ ಹಿನ್ನೆಲೆಯಲ್ಲಿ, ಕಾರ್ಯಕ್ರಮ ನಡೆಯುವ ನೆಹರೂ ಕ್ರೀಡಾಂಗಣಕ್ಕೆ ಭದ್ರತೆ ಹೆಚ್ಚಿಸಲಾಗಿದ್ದು, ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ನಾಳೆ ಹುಬ್ಬಳ್ಳಿಗೆ ಎಂಟ್ರಿ ಕೊಡಲಿರೋ ಅಮಿತ್ ಶಾ, ಪೌರತ್ವ ಕಾಯ್ದೆ ಬಗ್ಗೆ ಜನಜಾಗೃತಿ
ಭದ್ರತೆಗಾಗಿ ಹಿರಿಯ ಅಧಿಕಾರಿಗಳು ಸೇರಿದಂತೆ ಒಟ್ಟು ಮೂರು ಸಾವಿರ ಪೊಲೀಸರನ್ನು ‌ನಿಯೋಜಿಸಲಾಗಿದೆ. ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರ್‌ ಆರ್‌. ದಿಲೀಪ್‌ ಗುರುವಾರ ಭದ್ರತೆ ಪರಿಶೀಲಿಸಿದ್ದಾರೆ. ಗಣ್ಯರು ಪ್ರವೇಶಿಸುವ ದ್ವಾರಕ್ಕೆ ಈಗಾಗಲೇ ಪೊಲೀಸರನ್ನು ನಿಯೋಜಿಸಲಾಗಿದ್ದು, ಮೈದಾನದ ಮುಖ್ಯದ್ವಾರ ಬಂದ್‌ ಮಾಡಲಾಗಿದೆ. ಕಾರ್ಯಕ್ರಮವನ್ನು 50 ಸಾವಿರ ಜನ ಕುಳಿತು ವೀಕ್ಷಿಸಲು ಆಸನ ವ್ಯವಸ್ಥೆ ಮಾಡಲಾಗಿದ್ದು, ಎಂಟು ಕಡೆ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ. ಅಮಿತ್ ಶಾ ಆಗಮನ ಹಿನ್ನೆಲೆಯಲ್ಲಿ ನಗರದಲ್ಲಿ ಬಿಜೆಪಿ ಬಾವುಟಗಳು ರಾರಾಜಿಸುತ್ತಿವೆ.

ABOUT THE AUTHOR

...view details