ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಲ್ಲಿ ಟ್ರಾಫಿಕ್ ಜಾಮ್.. ಮಾರ್ಗ ಮಧ್ಯದಲ್ಲೇ ಪರದಾಡಿದ ಆ್ಯಂಬುಲೆನ್ಸ್!

ಆ್ಯಂಬುಲೆನ್ಸ್​ವೊಂದು ಟ್ರಾಫಿಕ್​ನಲ್ಲಿ ಸಿಲುಕಿಕೊಂಡು ಪರದಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಟ್ರಾಫಿಕ್ ಜಾಮ್​ನಲ್ಲಿ ಸಿಲುಕಿ ಆ್ಯಂಬುಲೆನ್ಸ್ ಪರದಾಟ

By

Published : Oct 26, 2019, 5:48 PM IST

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಟ್ರಾಫಿಕ್ ಸಮಸ್ಯೆ ಮಿತಿ ಮೀರಿ ಬೆಳೆಯುತ್ತಿದ್ದು, ಕೊಪ್ಪಿಕರ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾದ ಪರಿಣಾಮ ಟ್ರಾಫಿಕ್​ನಲ್ಲಿ ಸಿಲುಕಿಕೊಂಡು ಆ್ಯಂಬುಲೆನ್ಸ್​ವೊಂದು ಪರದಾಡಿದೆ.

ಟ್ರಾಫಿಕ್ ಜಾಮ್​ನಲ್ಲಿ ಸಿಲುಕಿ ಆ್ಯಂಬುಲೆನ್ಸ್ ಪರದಾಟ

ಹುಬ್ಬಳ್ಳಿಯ ಕೊಪ್ಪಿಕರ ರಸ್ತೆಯಲ್ಲಿ ಎರಡೂ ಬದಿಯಿಂದ ಬರುವ ವಾಹನಗಳ ಮಧ್ಯೆ ನುಸುಳಿಕೊಂಡು ಹೋಗುವಲ್ಲಿ ಆ್ಯಂಬುಲೆನ್ಸ್ ಪರದಾಡಿದೆ. ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕುವಂತ ಸ್ಥಿತಿ ನಿರ್ಮಾಣವಾಗಿದೆ. ಜನತೆ ಬೆಂಗಳೂರಿನ ಟ್ರಾಫಿಕ್ ನೋಡಿ ಹುಬ್ಬಳ್ಳಿ ಟ್ರಾಫಿಕ್ ತುಂಬಾ ಕಡಿಮೆ ಎಂದು ಹೇಳುತ್ತಿದ್ದರು. ಆದರೆ ಈಗಿನ ದಿನಗಳಲ್ಲಿ ಹುಬ್ಬಳ್ಳಿ, ಬೆಂಗಳೂರು ಮಹಾನಗರವನ್ನು ಟ್ರಾಫಿಕ್​ನಲ್ಲಿ ಹಿಂದಿಕ್ಕುವ ರೀತಿಯಲ್ಲಿ ಕಾಣುತ್ತಿದೆ.

ABOUT THE AUTHOR

...view details