ಕರ್ನಾಟಕ

karnataka

ETV Bharat / state

ಮೈತ್ರಿ ಸರ್ಕಾರ ಅಭದ್ರಗೊಳಿಸುವುದೇ ಬಿಜೆಪಿ ನಾಯಕರ ಕೆಲಸ : ವೇಣುಗೋಪಾಲ್ ಕಿಡಿ

ಚುನಾವಣೆಯಲ್ಲಿ ಅವರಿಗೆ ನೀಡಿದ ಜನಾದೇಶ ಮರೆತಿದ್ದಾರೆ. ಬಿಜೆಪಿಯ ನಾಯಕರು ವಿಫಲ ಯತ್ನ ನಡೆಸುತ್ತಿದ್ದಾರೆ. ನನಗೆ ಬಹಳ ವಿಶ್ವಾಸವಿದೆ. ಶಿವಳ್ಳಿಯ ಮೇಲಿನ ಪ್ರೀತಿಯಿಂದ ಇಲ್ಲಿನ ಜನರು ಮತ್ತೆ ನಮಗೆ ಮತ ಹಾಕುತ್ತಾರೆ. ನಮ್ಮ ದೇಶದಲ್ಲಿ ಬದಲಾವಣೆ ಆರಂಭವಾಗಿದೆ. ನನಗಿರುವ ಮಾಹಿತಿ‌ ಪ್ರಕಾರ ದೊಡ್ಡ ಮಟ್ಟದ ಬದಲಾವಣೆ ಬಯಸಿದ್ದಾರೆ ಎಂದು ವೇಣುಗೋಪಾಲ್ ಹೇಳಿದರು.

ಕೆ ಸಿ ವೇಣುಗೋಪಾಲ್

By

Published : May 12, 2019, 10:47 PM IST

ಹುಬ್ಬಳ್ಳಿ : ಮೈತ್ರಿ ಸರ್ಕಾರ ಅಭದ್ರಗೊಳಿಸುವುದೇ ಬಿಜೆಪಿ ನಾಯಕರ ಕೆಲಸವಾಗಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್​​ ಹೇಳಿದರು.

ಕುಂದಗೋಳದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಅವರಿಗೆ ನೀಡಿದ ಜನಾದೇಶ ಮರೆತಿದ್ದಾರೆ. ಬಿಜೆಪಿಯ ನಾಯಕರು ವಿಫಲ ಯತ್ನ ನಡೆಸುತ್ತಿದ್ದಾರೆ.

ಕೆ ಸಿ ವೇಣುಗೋಪಾಲ್
ನನಗೆ ಬಹಳ ವಿಶ್ವಾಸವಿದೆ. ಶಿವಳ್ಳಿಯ ಮೇಲಿನ ಪ್ರೀತಿಯಿಂದ ಇಲ್ಲಿನ ಜನರು ಮತ್ತೆ ನಮಗೆ ಮತ ಹಾಕುತ್ತಾರೆ. ನಮ್ಮ ದೇಶದಲ್ಲಿ ಬದಲಾವಣೆ ಆರಂಭವಾಗಿದೆ. ನನಗಿರುವ ಮಾಹಿತಿ‌ ಪ್ರಕಾರ ದೊಡ್ಡ ಮಟ್ಟದ ಬದಲಾವಣೆ ಬಯಸಿದ್ದಾರೆ.ಯುವಕರಿಗೆ ಉದ್ಯೋಗ ಸಿಕ್ಕಿಲ್ಲ, ರೈತರಿಗೆ ಯಾವುದೇ ಕೆಲಸವಾಗಿಲ್ಲ. ಹೀಗಾಗಿ ಮೋದಿ ಸರ್ಕಾರದ ವಿರುದ್ಧ ಜನಮತ‌ವಿದೆ. ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷರು 20 ಶಾಸಕರು ನಮ್ಮ ಜೊತೆ ಇದ್ದಾರೆ ಅಂತಾರೆ, ಮೋದಿ ಬಂಗಾಳದಲ್ಲಿ 40 ಜನ ಇದ್ದಾರೆ ಅಂತಾರೆ. ಬಿಜೆಪಿ ನಾಯಕರು ಯಾವ ಮಟ್ಟಕ್ಕೆ ಇಳಿದಿದ್ದಾರೆ‌ ಎಂದು ಕಿಡಿಕಾರಿದರು.

ಯಾರು ಏನೇ ಹೇಳಲಿ ಮೈತ್ರಿ ಸರ್ಕಾರ ಮುಂದುವರೆಯುತ್ತದೆ. ನನಗೆ ಬಹಳ ಆತ್ಮವಿಶ್ವಾಸ ವಿದೆ. ಸಿದ್ದರಾಮಯ್ಯ ಮುಂದಿನ ಸಿಎಂ ವಿಚಾರ ಈಗಾಗಲೇ ಅವರೇ ಕ್ಲೀಯರ್ ಮಾಡಿದ್ದಾರೆ. ಯಾವುದೇ ಆತಂಕವಿಲ್ಲ. ನಮ್ಮ ಮೈತ್ರಿ ಸರ್ಕಾರ ಮುಂದುವರೆಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

For All Latest Updates

TAGGED:

ABOUT THE AUTHOR

...view details