ಹುಬ್ಬಳ್ಳಿ:ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಮತದಾರರ ಮಾಹಿತಿ ಸಂಗ್ರಹಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿತ್ತು. ಏಜೆನ್ಸಿಯವರು ಮತದಾರರ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ ಎಂದು ಆರೋಪಿಸಿ, ದೂರು ನೀಡಲಾಗಿತ್ತು. ಈ ಹಿನ್ನೆಲೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗ್ಡೆ ಹೇಳಿದ್ದಾರೆ.
ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕೆಲವು ಮುಖಂಡರು ಮಾಹಿತಿ ಸಂಗ್ರಹದಿಂದ ಮತದಾರರ ಹೆಸರು ಡಿಲೀಟ್ ಆಗುವ ಚಾನ್ಸ್ ಇದೆ ಎಂದು ಆರೋಪಿಸಿ ದೂರು ನೀಡಿದ್ದರು. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ 3 ಜನರ ವಿರುದ್ಧ ದೂರು ದಾಖಲಾಗಿದೆ. ಈ ಕುರಿತು ಚುನಾವಣಾ ಆಯೋಗದಿಂದ ನಮಗೆ ರಿಪೋರ್ಟ್ ಕೇಳಿದ್ದರು. ಹೀಗಾಗಿ ನಾನು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದೇನೆ. ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡಿದ್ದೇನೆ ಎಂದರು.
ಜಿಲ್ಲಾಧಿಕಾರಿ ಗುರುದತ್ತ ಹೆಗ್ಡೆ ನಮ್ಮ ಜಿಲ್ಲೆಯಲ್ಲಿ 99 ಸಾವಿರ ವೋಟರ್ ಐಡಿ ಡಿಲೀಟ್ ಆಗಿವೆ. ಅದಕ್ಕೆ ಕಾರಣ ಡುಪ್ಲಿಕೇಟ್ ವೋಟರ್ಸ್. ಒಂದು ಕ್ಷೇತ್ರದಲ್ಲಿ ಇದ್ದವರ ಹೆಸರು, ಮತ್ತೊಂದು ಕ್ಷೇತ್ರದಲ್ಲಿ ಇರಬಹುದು. ಅದನ್ನು ಚೆಕ್ ಮಾಡಿ 47 ಸಾವಿರ ವೋಟರ್ಸ್ ಡುಪ್ಲಿಕೇಟ್ ಇರೋ ಕಾರಣ ಡಿಲೀಟ್ ಆಗಿವೆ. ಕೆಲವು ಮೃತರಾದವರ ಹೆಸರು ಡಿಲೀಟ್ ಆಗಿದೆ. ಕೆಲವರ ಸ್ಥಳಾಂತರ ಹೆಸರು ಡಿಲೀಟ್ ಆಗಿದೆ. ಹೀಗಾಗಿ ಧಾರವಾಡ ಜಿಲ್ಲೆಯಲ್ಲಿ 99 ಸಾವಿರ ಮತಗಳು ಡಿಲೀಟ್ ಆಗಿವೆ. ಇದನ್ನು ನಾವೇ ರಾಜಕೀಯ ಪಕ್ಷಗಳಿಗೆ ನೀಡಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ:ಮತದಾರರ ಪಟ್ಟಿಯಿಂದ ಹೆಸರು ಡಿಲಿಟ್ ಪ್ರಕರಣ: ಹಳೇ ಹುಬ್ಬಳ್ಳಿ ಠಾಣೆಗೆ ಡಿಸಿ, ಕಮಿಷನರ್ ದೌಡು
ತಪ್ಪಾಗಿ ಯಾರಾದರೂ ಡಿಲೀಟ್ ಆಗಿದ್ದರೆ, ಅಂತವರ ಹೆಸರು ಕೊಡಿ. ನಾವು ಅದನ್ನು ಸರಿ ಮಾಡುತ್ತೇವೆ. ಏಜೆನ್ಸಿಗಳಿಗೆ ಯಾವುದೇ ಅನುಮತಿ ನೀಡಿಲ್ಲ. ಏಜೆನ್ಸಿ ಅವರು ಇಂಡಿಪೆಂಡೆಂಟ್ ಆಗಿ ಸರ್ವೇ ಮಾಡ್ತಿದಾರೆ. ನಾವು ಡಿಟೇಲ್ ರಿಪೋರ್ಟ್ ಇಲೆಕ್ಷನ್ ಕಮಿಷನ್ಗೆ ಒಪ್ಪಿಸುತ್ತೇವೆ. ತನಿಖೆಯಾದ ಬಳಿಕ ಇವರ ಹೊರತಾಗಿ ಯಾರೇ ಇದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಾಗುತ್ತದೆ ಎಂದು ಹೇಳಿದರು.