ಕರ್ನಾಟಕ

karnataka

ETV Bharat / state

ಕರ್ನಾಟಕದಲ್ಲಿ ​ಬಿಜೆಪಿ ಪರ ಟ್ರೆಂಡ್, ಮತ್ತೆ ಗೆಲುವು ನಿಶ್ಚಿತ: ಅರುಣ್ ಸಿಂಗ್

ಇಡೀ ದೇಶಾದ್ಯಂತ ಬಿಜೆಪಿ ಗೆಲುವು ಸಾಧಿಸಲಿದೆ. ಮತ್ತೆ ಕರ್ನಾಟಕದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.

again-bjp-will-win-in-karnataka-says-arun-singh
ಮತ್ತೆ ಕರ್ನಾಟಕದಲ್ಲಿ ಬಿಜೆಪಿ ಗೆಲುವುದು ನಿಶ್ಚಿತ : ಶ್ರೀಗಳಿಂದ ಆಶೀರ್ವಾದ ಎಂದ ಅರುಣ ಸಿಂಗ್

By

Published : Oct 16, 2022, 9:34 PM IST

ಧಾರವಾಡ :ಧಾರವಾಡ ಗ್ರಾಮೀಣ ಭಾಗದಲ್ಲಿ ನಮಗೆ ಬೃಹತ್ ಗೆಲುವು ಸಿಗಲಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಕಾರ್ಯಕರ್ತರ ಸಂಕಲ್ಪ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೇವಲ ಕರ್ನಾಟಕ ಅಷ್ಟೇ ಅಲ್ಲ. ಇಡೀ ದೇಶಾದ್ಯಂತ ಬಿಜೆಪಿ ಗೆಲುವು ಸಾಧಿಸಲಿದೆ. ಮೂರುಸಾವಿರ ಮಠದ ಸ್ವಾಮೀಜಿ ಬಳಿ ಹೋಗಿದ್ದೆ. ಅವರು ಮತ್ತೆ ಕರ್ನಾಟಕದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಆಶೀರ್ವಾದ ಮಾಡಿದ್ದಾರೆ. ಕರ್ನಾಟಕದ ಧಾರವಾಡದ ಹೆಸರು ಇಡೀ ದೇಶಕ್ಕೆ ಗೊತ್ತಿದೆ. ಎಲ್ಲೇ ಕಲ್ಲೆಸೆದರೂ ಅದು ಸಾಹಿತಿಗಳ ಮನೆ ಮೇಲೆ ಬೀಳುತ್ತದೆ. ಇಂತಹ ನೆಲಕ್ಕೆ ನನ್ನದೊಂದು ಪ್ರಣಾಮ ಎಂದರು.

ಮತ್ತೆ ಕರ್ನಾಟಕದಲ್ಲಿ ಬಿಜೆಪಿ ಗೆಲುವುದು ನಿಶ್ಚಿತ : ಶ್ರೀಗಳಿಂದ ಆಶೀರ್ವಾದ ಎಂದ ಅರುಣ ಸಿಂಗ್

ಧಾರವಾಡ ಕ್ಷೇತ್ರದಲ್ಲಿ 1.28 ಲಕ್ಷ ರೈತರಿದ್ದಾರೆ. ಅವರಿಗೆಲ್ಲ ಮೋದಿ ಸರ್ಕಾರದಲ್ಲಿ ಅವರ ಅಕೌಂಟ್​​ಗೆ ನೇರ ಹಣ ಹಾಕಲಾಗಿದೆ. ರಾಹುಲ್ ಗಾಂಧಿ ನೀವು ಏನು ಹಾಕಿದ್ದೀರಿ ಹೇಳಿ. ಶುದ್ಧ ಕುಡಿಯುವ ನೀರನ್ನು ನೀವು ಕೊಡಲೇ ಇಲ್ಲ. ಆದರೆ ಧಾರವಾಡ ಗ್ರಾಮೀಣ ಭಾಗದ ಜನರು ಶುದ್ಧ ನೀರು ಕುಡಿಯುವ ಹಾಗೆ ನಾವು ಮಾಡಿದ್ದೇವೆ. ಇನ್ನು ಮೀಸಲಾತಿ ಬಗ್ಗೆ ಮಾತನಾಡುವ ನೀವು ಯಾಕೆ ಜನರಿಗೆ ಅದನ್ನು ನೀಡಲಿಲ್ಲ. ನಾವು ಆದಿವಾಸಿ ಸಮಾಜದ ಮಹಿಳೆಯನ್ನು ರಾಷ್ಟ್ರಪತಿಯಾಗಿ ನೇಮಕ ಮಾಡಿದ್ದೇವೆ. ಬೊಮ್ಮಾಯಿ ಸರ್ಕಾರದಲ್ಲಿ ಮೀಸಲಾತಿ ನೀಡಲಾಗಿದೆ ಎಂದು ಹೇಳಿದರು.

ಪಿಎಸ್ಐ, ಸೇರಿದಂತೆ ಶಿಕ್ಷಕರ ನೇಮಕದಲ್ಲೂ ಸಿದ್ದರಾಮಯ್ಯ ಕಾಲದಲ್ಲಿ ಹಗರಣ ಆಗಿದೆ. ಇದು ಭಾರತ ಜೋಡೋ ಯಾತ್ರೆ ಅಲ್ಲ ಇದು ಸಿದ್ದರಾಮಯ್ಯ ಹಾಗೂ ಡಿಕೆಶಿ ಜೋಡಿಸುವ ಯಾತ್ರೆ. ಇವರಿಬ್ಬರು ಮುಖಾಮುಖಿಯಾಗಿ ಕುಳಿತುಕೊಳ್ಳುವ ಸ್ಥಿತಿಯಲ್ಲಿಲ್ಲ. ಸಂಸ್ಕೃತಿಯೇ ಗೊತ್ತಿಲ್ಲದವರು ಹೇಗೆ ಜೋಡಿಸುತ್ತಾರೆ ಎಂದು ಟೀಕಿಸಿದರು.

ಇದೀಗ ಟ್ರೆಂಡ್ ಬದಲಾಗಿದೆ, ಟ್ರೆಂಡ್​ ಬಿಜೆಪಿ ಪರವಾಗಿದೆ. ಎಲ್ಲೆಲ್ಲಿ ಬಿಜೆಪಿ ಸರ್ಕಾರ ಇದೆಯೋ. ಅಲ್ಲಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ಇದನ್ನೂ ಓದಿ :ಮಾಜಿ ಸಚಿವ ವಿನಯ್​ ಕುಲಕರ್ಣಿಗೆ ಟಾಂಗ್ ಕೊಟ್ಟ ಶಾಸಕ ಅಮೃತ್ ದೇಸಾಯಿ

ABOUT THE AUTHOR

...view details