ಹುಬ್ಬಳ್ಳಿ:ಸಂಕ್ರಾಂತಿ ಹಾಗೂ ಸಾಲು ಸಾಲು ರಜೆ ಪ್ರಯುಕ್ತ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹಾಗೂ ಹುಬ್ಬಳ್ಳಿಯಿಂದ ಧರ್ಮಸ್ಥಳಕ್ಕೆ ಹೆಚ್ಚಿನ ಪ್ರಯಾಣಕರು ಸಂಚರಿಸುವ ಹಿನ್ನೆಲೆಯಲ್ಲಿ ಹೆಚ್ಚುವರಿ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದ್ದಾರೆ.
ಎರಡನೇ ಶನಿವಾರ, ಸಾರ್ವಜನಿಕ ರಜೆ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಹಾಗೂ ಹುಬ್ಬಳ್ಳಿಯಿಂದ ಧರ್ಮಸ್ಥಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಜನರು ಪ್ರಯಾಣ ಮಾಡಿದ್ದಾರೆ. ನಿತ್ಯದ ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಹೆಚ್ಚಿದ ಬೇಡಿಕೆಗೆ ತಕ್ಕಂತೆ ಬೆಂಗಳೂರಿನಿಂದ ಹೆಚ್ಚುವರಿಯಾಗಿ ಒಂದು ಮಲ್ಟಿ ಆ್ಯಕ್ಸಲ್, ಒಂದು ಸ್ಲೀಪರ್ ಹಾಗೂ ಎಂಟು ವೇಗದೂತ ಬಸ್ಸುಗಳು ಹಾಗೂ ಧರ್ಮಸ್ಥಳಕ್ಕೆ ಎರಡು ವೇಗದೂತ ಬಸ್ಸುಗಳನ್ನು ಬಿಡಲಾಗಿದೆ.