ಕರ್ನಾಟಕ

karnataka

ETV Bharat / state

ಧಾರವಾಡದಲ್ಲಿ ಭ್ರಷ್ಟ ಇಂಜಿನಿಯರ್​ಗೆ ಎಸಿಬಿ ಶಾಕ್​! - engineer

ಧಾರವಾಡದಲ್ಲಿ ಲಂಚ ಸ್ವೀಕರಿಸುತ್ತಿದ್ದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್​ ವೆಂಕಟೇಶ್​ ಇಬ್ರಾಹಿಂಪುರ ಎಂಬಾತನನ್ನು ಎಸಿಬಿ ಅಧಿಕಾರಿಗಳು ಖೆಡ್ಡಾಕ್ಕೆ ಕೆಡವಿದ್ದಾರೆ

ಧಾರವಾಡ

By

Published : Jul 3, 2019, 4:42 AM IST

ಧಾರವಾಡ: ಲಂಚ ಸ್ವೀಕರಿಸುತ್ತಿದ್ದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್​ ವೆಂಕಟೇಶ್​ ಇಬ್ರಾಹಿಂಪುರ ಎಂಬಾತ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಇಂಜಿನಿಯರ್​ ಆಗಿರುವ ವೆಂಕಟೇಶ್​ ಇಬ್ರಾಹಿಂಪುರ, ಸಿವಿಲ್ ಗುತ್ತಿಗೆದಾರ ಸಂದೇಶ್​ ಎಂಬುವವರಿಗೆ ಕಟ್ಟಡ ನಿರ್ಮಾಣದ ಬಿಲ್ ಪಾವತಿ ಮಾಡಲು 60 ಸಾವಿರ ರೂಪಾಯಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಖಚಿತ ಮಾಹಿತಿ ಮೇರೆಗೆ ಎಸಿಬಿ ಅಧಿಕಾರಿಗಳು ದಾಳಿ‌ ನಡೆಸಿದ್ದಾರೆ.

70 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದ ವೆಂಕಟೇಶ್​ ಮೊದಲ ಹಂತದಲ್ಲಿ 60 ಸಾವಿರ ಲಂಚ ಪಡೆಯುವಾಗ ಕಚೇರಿಯಲ್ಲಿಯೇ ಎಸಿಬಿ ‌ಶಾಕ್​ ನೀಡಿದೆ.

ABOUT THE AUTHOR

...view details