ಹುಬ್ಬಳ್ಳಿ:ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ತಣ್ಣಗಾಗಿದೆ ಎನ್ನುವಷ್ಟರಲ್ಲಿಯೇ ಲವ್ ಜಿಹಾದ್ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕಿದ್ದ ಕಿಡಿಗೇಡಿ ಯುವಕನೋರ್ವನನ್ನು ಬೆಂಡಿಗೇರಿ ಪೊಲೀಸರು ಬಂಧಿಸಿದ್ದಾರೆ. ಕೇಶ್ವಾಪುರದ ಪವನ್ ಎಂಬಾತನೇ ಬಂಧಿತ ಯುವಕ.
ಬಂಧಿತ ಆರೋಪಿಯ ಬೆಂಡಿಗೇರಿ ಯುವಕ ಹಾಗೂ ಆನಂದನಗರದ ಯುವತಿಯ ಕುರಿತು ಕೋಮು ಭಾವನೆ ಕೆರಳಿಸುವ ಸಂದೇಶವನ್ನ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದ. ತಪ್ಪು ಕಲ್ಪನೆಯಿಂದ ಅನ್ಯ ಕೋಮಿನ ಯುವಕ-ಯುವತಿ ಕುರಿತು ಈತ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದ ಎಂದು ತಿಳಿದು ಬಂದಿದೆ.