ಹುಬ್ಬಳ್ಳಿ:ನಗರದ ಬಾಲಕಿಯೊಬ್ಬಳನ್ನು ದಾಂಡೇಲಿಯ ಬಸ್ ನಿಲ್ದಾಣದಲ್ಲಿ ಯುವಕನೊಬ್ಬ ಅಪಹರಿಸಿರುವ ಕುರಿತು ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕಿ ಪುಸಲಾಯಿಸಿ ಕಿಡ್ನಾಪ್ ಮಾಡಿದ ಕಿರಾತಕ..! - ದಾಂಡೇಲಿ ಕಿಡ್ನಾಪ್
ದಾಂಡೇಲಿಯ ಬಸ್ ನಿಲ್ದಾಣದಿಂದ ಯುವಕನೊಬ್ಬ ಬಾಲಕಿ ಅಪಹರಿಸಿರುವ ಕುರಿತು ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕಿಡ್ನಾಪ್
ಇಲ್ಲಿನ ನವನಗರ ಗಾಮನಗಟ್ಟಿ ಕರಿಯಮ್ಮ ದೇವಿ ದೇವಸ್ಥಾನದ ಬಳಿಯ ನಿವಾಸಿ ಮಿನಾಜಬೇಗಂ ಮಹಮ್ಮದ್ ಅನ್ಸಾರಿ (15) ಅಪಹರಿಸಲ್ಪಟ್ಟ ಬಾಲಕಿ.
ಮಿನಾಜ ಜೂ. 11ರಂದು ತಾಯಿ ಜತೆಗೆ ಬಸ್ನಲ್ಲಿ ಧಾರವಾಡದಿಂದ ಕಾರವಾರದ ಕಡೆಗೆ ಹೊರಟಿದ್ದರು. ಚಹಾ ಕುಡಿಯಲು ಎಂದು ದಾಂಡೇಲಿ ಬಸ್ ನಿಲ್ದಾಣದಲ್ಲಿ ಇಳಿದಿದ್ದರು. ಆ ವೇಳೆ ಬೈಕ್ನಲ್ಲಿ ಬಂದ ಯುವಕನೊಬ್ಬ ಆಕೆಯನ್ನು ಪುಸಲಾಯಿಸಿ ಅಪಹರಿಸಿದ್ದಾನೆ ಎಂದು ಪಾಲಕರು ದೂರಿದ್ದಾರೆ.
Last Updated : Jun 22, 2020, 12:06 PM IST