ಹುಬ್ಬಳ್ಳಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2019-20 ರ ಬಜೆಟ್ ಉತ್ತಮವಾಗಿದೆ. ತೆರಿಗೆ ಹಾಗೂ ಬ್ಯಾಂಕಿಂಗ್ ಸೇವೆಯಲ್ಲಿ ವಿಶೇಷವಾದ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ ಎಂದು ನಗರದ ಚಾರ್ಟೆಡ್ ಅಕೌಂಟೆಂಟ್ ವೈ.ಎಂ. ಕಠಾವ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
2019-20 ರ ಬಜೆಟ್ ಉತ್ತಮವಾಗಿದೆ: ಕಠಾವಕರ್
2019-20 ರ ಬಜೆಟ್ ಉತ್ತಮವಾಗಿದ್ದು, ತೆರಿಗೆ ಹಾಗೂ ಬ್ಯಾಂಕಿಂಗ್ ಸೇವೆಯಲ್ಲಿ ವಿಶೇಷವಾದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತೆರಿಗೆ ಸಲಹೆಗಾರರಾದ ಎಂ ಕಠಾವಕರ್ ತಿಳಿಸಿದ್ದಾರೆ.
ನಗರದ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, 80,250 ಕೋಟಿ ರೂ. ಹಣವನ್ನು ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಿರುವುದು, ಗ್ರಾಮೀಣ ಕೈಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಿರುವುದು ವಿಶೇಷವಾಗಿದೆ. ಅಲ್ಲದೇ ತೆರಿಗೆಯಲ್ಲಿ ಹೊಸ ನಿರ್ಧಾರಗಳನ್ನು ಜಾರಿಗೊಳಿಸುವ ಮೂಲಕ ಸಾರ್ವಜನಿಕರ ಗೃಹಸಾಲ ಹಾಗೂ ಕೃಷಿಯ ಶೂನ್ಯ ಬಂಡವಾಳದಂತಹ ಯೋಜನೆಗಳನ್ನು ಜಾರಿಗೊಳಿಸಿರುವುದು ಒಳ್ಳೆಯ ವಿಚಾರವಾಗಿದೆ. ಇದೆಲ್ಲವನ್ನೂ ಗಮನಿಸಿದಾಗ ಇದು ದೂರಗಾಮಿ ಬಜೆಟ್ ಆಗಿದೆ ಎಂದು ತಿಳಿಸಿದ್ರು.
ತತ್ಕ್ಷಣವಾಗಿ ಫಲ ನೀಡದಿದ್ದರೂ ಕೂಡ ಸಾರ್ವಜನಿಕರಿಗೆ ಉತ್ತಮವಾದ ಬಜೆಟ್ ಇದಾಗಿದೆ. ಪೆಟ್ರೋಲ್ ಡೀಸೆಲ್ ದರ ಏರಿಕೆಯಿಂದ ಸ್ವಲ್ಪ ಪ್ರಮಾಣದ ತೊಂದರೆಯಾಗಿದೆ ಎಂದು ಕಠಾವ್ಕರ್ ಹೇಳಿದರು.