ಧಾರವಾಡ :ಕೊರೊನಾ ವೈರಸ್ನಿಂದ ಜಿಲ್ಲೆಯಲ್ಲಿ ಕೋವಿಡ್ ಕರ್ತವ್ಯದಲ್ಲಿದ್ದ 13 ಶಿಕ್ಷಕರು ಬಲಿಯಾಗಿದ್ದಾರೆ ಎಂದುಡಿಡಿಪಿಐ ಎಂಎಲ್ ಮೋಹನ ಹಂಚಾಟೆ ಹೇಳಿದರು.
ಕೊರೊನಾ ಕರ್ತವ್ಯದ ವೇಳೆ ಸೋಂಕು : ಧಾರವಾಡದಲ್ಲಿ 13 ಜನ ಶಿಕ್ಷಕರ ಸಾವು
ಒಟ್ಟು ಶಿಕ್ಷಣ ಇಲಾಖೆಯಿಂದ 70 ಮಂದಿ ಶಿಕ್ಷಕರು ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ 13 ಜನ ಸಾವನ್ನಪ್ಪಿದ್ದರೇ, ಇನ್ನೂ 5 ಜನರಿಗೆ ಕೊರೊನಾ ದೃಢವಾಗಿದೆ..
ಶಿಕ್ಷಕರ ಸಾವು
ಈ ಕುರಿತು ಮಾತನಾಡಿರುವ ಅವರು, 14 ದಿನದಲ್ಲಿ ಬರೊಬ್ಬರು 13 ಶಿಕ್ಷಕರು ಕೋವಿಡ್ಗೆ ಬಲಿಯಾಗಿದ್ದು, ಇವರು ಕೊರೊನಾ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.
ಒಟ್ಟು ಶಿಕ್ಷಣ ಇಲಾಖೆಯಿಂದ 70 ಮಂದಿ ಶಿಕ್ಷಕರು ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ 13 ಜನ ಸಾವನ್ನಪ್ಪಿದ್ದರೇ, ಇನ್ನೂ 5 ಜನರಿಗೆ ಕೊರೊನಾ ದೃಢವಾಗಿದೆ. ಅವರು ಹೋಮ್ ಐಸೋಲೇಷನ್ಲ್ಲಿದ್ದಾರೆ. ಜಿಲ್ಲಾಡಳಿತದ ಆದೇಶ ನಮಗೆ ಸ್ವಲ್ಪ ತೊಂದರೆಯಾಗುತ್ತಿದೆ ಎಂದಿದ್ದಾರೆ.