ಹುಬ್ಬಳ್ಳಿ : ಎಐಸಿಸಿ ಅಧ್ಯಕ್ಷರಾಹುಲ್ ಗಾಂಧಿ ಈ ಬಾರಿ ಕೇರಳದ ವೈನಾಡ್ ಕ್ಷೇತ್ರದಿಂದ ಸ್ಪರ್ಧಿಸುತ್ತಾರಂತೆ. ಆದ್ರೆ, ರಾಹುಲ್ ಈ ಬಾರಿ ಅಮೇಥಿ, ವೈನಾಡ್ ಎರಡೂ ಕ್ಷೇತ್ರಗಳಲ್ಲಿ ಸೋತು ನಿರುದ್ಯೋಗಿಯಾಗುತ್ತಾರೆ ಎಂದು ಬಿಜೆಪಿ ಅಭ್ಯರ್ಥಿ, ಸಂಸದ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.
ಮೋದಿಗೆ ದೇಶವೇ ಕುಟುಂಬ, ದೇವೇಗೌಡರಿಗೆ ಅವರ ಕುಟುಂಬವೇ ದೇಶ: ಜೋಶಿ - ಜೆಡಿಎಸ್
ರಾಹುಲ್ ಈ ಬಾರಿ ಅಮೇಥಿ, ವೈನಾಡ್ ಎರಡೂ ಕ್ಷೇತ್ರಗಳಲ್ಲಿ ಸೋತು ನಿರುದ್ಯೋಗಿಯಾಗುತ್ತಾರೆ ಎಂದು ಸಂಸದ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದರು.
ಹಿಂದುಳಿದ ವರ್ಗಗಳ ಮುಖಂಡರ ಪ್ರಹ್ಲಾದ್ ಜೋಶಿ ಸಭೆಯಲ್ಲಿ ಮಾತನಾಡಿದ
125 ವರ್ಷದ ಪಕ್ಷಕ್ಕೆ ಧಾರವಾಡಲ್ಲಿ ನನ್ನ ವಿರುದ್ದ ಸ್ಪರ್ಧಿಸಲು ಅಭ್ಯರ್ಥಿಯೇ ಸಿಗುತ್ತಿಲ್ಲವೆಂದು ಜೋಶಿ ಗೇಲಿ ಮಾಡಿದರು. ಇದೇ ವೇಳೆ ಜೆಡಿಎಸ್ ವಿರುದ್ಧವೂ ವಾಗ್ದಾಳಿ ನಡೆಸಿದ ಜೋಶಿ, ನರೇಂದ್ರ ಮೋದಿಯವರಿಗೆ ಇಡೀ ದೇಶವೇ ಕುಟುಂಬ. ಆದ್ರೆ ದೇವೇಗೌಡ್ರಿಗೆ ಅವರ ಕುಟುಂಬವೇ ದೇಶ. ಅವರ ಮೊಮ್ಮನಿಗೆ ಸ್ಥಾನ ಬಿಟ್ಟುಕೊಟ್ಟಿದ್ದಕ್ಕೆ ಕಣ್ಣೀರಿಟ್ಟರು ಪಾಪ ಎಂದು ಜೆಡಿಎಸ್ ನಾಯಕರ ಕಾಲೆಳೆದರು.