ದಾವಣಗೆರೆ:ಅಕ್ರಮವಾಗಿ 800 ಗೋವುಗಳ ಚರ್ಮ ಸಾಗಣೆ ಮಾಡುತ್ತಿದ್ದ ಎರಡು ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ನಡೆದಿದೆ.
ಅಕ್ರಮವಾಗಿ ಗೋವುಗಳ ಚರ್ಮ ಸಾಗಣೆ ಪತ್ತೆ: ಎರಡು ವಾಹನಗಳು ವಶಕ್ಕೆ - Skin
ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಅಕ್ರಮವಾಗಿ 800 ಗೋವುಗಳ ಚರ್ಮವನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ಹಿಂದೂ ಜಾಗರಣ ವೇದಿಕೆಯ ಯುವ ಪಡೆಯು ನೀಡಿದ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಕ್ರಮವಾಗಿ ಗೋವುಗಳ ಚರ್ಮ ಸಾಗಾಟ
ಹರಿಹರ ನಗರದ ಶ್ರೀಕಾಂತ್ ಚಿತ್ರಮಂದಿರದ ಬಳಿ ಅನಧಿಕೃತವಾಗಿ ತಮಿಳುನಾಡು ಮೂಲದ ಲಾರಿ ಹಾಗೂ ಟಾಟಾ ಏಸ್ ವಾಹನದ ಮೂಲಕ ಗೋವುಗಳ ಚರ್ಮವನ್ನು ಸಾಗಿಸಲಾಗುತಿತ್ತು. ಈ ಬಗ್ಗೆ ಹಿಂದೂ ಜಾಗರಣ ವೇದಿಕೆಯ ಯುವ ಪಡೆಯು ನೀಡಿದ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು.ಈ ಸಂಬಂಧ ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.