ದಾವಣಗೆರೆ :ಹಾಲಿನ ಲಾರಿ ಮತ್ತು ಓಮ್ನಿ ಕಾರು ನಡುವೆ ಅಪಘಾತ ಸಂಭವಿಸಿ, ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನ್ಯಾಮತಿ ಪಟ್ಟಣದ ಹೊರವಲಯದ ಕುಮಟಾ-ಕಾರಮಡಗಿ ರಾಜ್ಯ ಹೆದ್ದಾರಿಯ ಸಾಲಬಾಳು ಗ್ರಾಮದ ಬಳಿ ಸಂಭವಿಸಿದೆ.
ಲಾರಿ-ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಸಂತೋಷ (32) ಹಾಗೂ ಕಾರು ಚಾಲನೆ ಮಾಡುತ್ತಿದ್ದ ಶ್ರೀನಿವಾಸ (33) ದುರ್ಮರಣಕ್ಕೀಡಾಗಿದ್ದಾರೆ. ಮೃತರನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹೊಸೂರು ಗ್ರಾಮದ ನಿವಾಸಿಗಳೆಂದು ಗುರುತಿಸಲಾಗಿದೆ. ಹೊಸೂರಿನಿಂದ ಸವಳಂಗ ಕಡೆ ಹೋಗುತ್ತಿದ್ದ ಕಾರಿಗೆ, ನ್ಯಾಮತಿಯ ಕಡೆ ತೆರಳುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ.